alex Certify BIG NEWS: SSLC ಫಲಿತಾಂಶ ಪ್ರಕಟ; 625ಕ್ಕೆ 625 ಅಂಕ ಪಡೆದ 145 ವಿದ್ಯಾರ್ಥಿಗಳು; ಇಲ್ಲಿದೆ ಟಾಪರ್ಸ್ ಲಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: SSLC ಫಲಿತಾಂಶ ಪ್ರಕಟ; 625ಕ್ಕೆ 625 ಅಂಕ ಪಡೆದ 145 ವಿದ್ಯಾರ್ಥಿಗಳು; ಇಲ್ಲಿದೆ ಟಾಪರ್ಸ್ ಲಿಸ್ಟ್

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ 10 ವರ್ಷಗಳಲ್ಲಿಯೇ ಈ ವರ್ಷ ಅತಿ ಹೆಚ್ಚು ಫಲಿತಾಂಶ ಬಂದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಬಾರಿ ಶೇ.81.30ರಷ್ಟು ವಿದ್ಯಾರ್ಥಿಗಳು, 90.29ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರು.

ಎಸ್.ಎಸ್.ಎಲ್.ಸಿ. ಯಲ್ಲಿ ಒಂದು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ಪಡೆದ ವಿಜಯಪುರ ಜಿಲ್ಲೆಯ ಅಮಿತ್ ಮಾದರ್ ಪ್ರಥಮ ಹಾಗೂ ತುಮಕೂರು ಜಿಲ್ಲೆಯ ಬಿ.ಆರ್.ಭೂಮಿಕಾ ಎರಡನೇ ಸ್ಥಾನ ಪಡೆದಿದ್ದಾರೆ.

ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಅಮಿತ್ ಮಾದರ್, ತುಮಕೂರು ಜಿಲ್ಲೆಯ ಬಿ.ಆರ್.ಭೂಮಿಕಾ, ಹಾವೇರಿ ಜಿಲ್ಲೆಯ ಪ್ರವೀಣ್ ನೀರಲಗಿ, ಬೆಳಗಾವಿಯ ಸಹನಾ ರಾಯರ್, ವಿಜಯಪುರ ಜಿಲ್ಲೆಯ ಐಶ್ವರ್ಯ ಕನಸೆ, ಉಡುಪಿಯ ಗಾಯತ್ರಿ, ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯ ಅನಘಾ ಎಂ.ಮೂರ್ತಿ, ಚಿಕ್ಕಮಗಳೂರಿನ ಎಸ್.ಎಸ್.ಆಕೃತಿ, ಹಾಸನ ಜಿಲ್ಲೆಯ ಅರ್ಜುನ್ ನಾಯ್ಕ್, ಬಳ್ಳಾರಿಯ ಕೂಡ್ಲಗಿಯ ಕವನಾ, ಶಿರಸಿ ಮಾರಿಕಾಂಬ ಶಾಲೆಯ ಚಿರಾಗ್ ಮಹೇಶ್ ನಾಯ್ಕ್, ಮೈಸೂರಿನ ಆದರ್ಶ ವಿದ್ಯಾಲಯದ ಎಂ.ಜಿ.ಏಕತಾ, ಕುಂದಾಪುರದ ಕಲರವ ಪ್ರೌಢಶಾಲೆಯ ನಿಶಾ, ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಹೆಚ್.ಎನ್.ಪ್ರಗತಿ, ಮಂಡ್ಯದ ಶ್ರೀಮಹಾಲಕ್ಷ್ಮಿ ಹೈಸ್ಕೂಲಿನ ಅಪೂರ್ವ, ಶಿವಮೊಗ್ಗದ ಹೆಚ್.ಎನ್.ಅನನ್ಯಾ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹನುಮಂತಪುರ ಗೇಟ್ ನ ಬಿಜಿ ಎಸ್ ಪಬ್ಲಿಕ್ ಶಾಲೆಯ ಹರ್ಷಿತಾ, ಪುತ್ತೂರಿನ ವಿವೇಕಾನಂದ ಇಂಗ್ಲೀಷ್ ಹೈಸ್ಕೂಲ್ ನ ಆತ್ಮೀಯ ಕಶ್ಯಪ್, ಮೈಸೂರು ಜಿಲ್ಲೆ ನಂಜನಗೂಡಿನ ಕಾರ್ಮೆಲ್ ಸ್ಕೂಲ್ ನ ದೇವಿಕಾ ಸೇರಿದಂತೆ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿದ್ದಾರೆ.

ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು karresults.nic.in ಅಥವಾ http://kseeb.kar.nic.inಗೆ ಭೇಟಿ ನೀಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...