ಬೆಂಗಳೂರು: ಈ ವರ್ಷ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವಂತೆ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
2020-21ನೇ ಸಾಲಿನಲ್ಲಿ ಸರಿಯಾಗಿ ಪಾಠಗಳನ್ನೇ ಮಾಡಿಲ್ಲ. ಪಠ್ಯ ಬೋಧನೆ ಮಾಡದೇ ಪರೀಕ್ಷೆಗಳನ್ನು ಮಾಡುವುದಾದರೂ ಹೇಗೆ? ಹೀಗಾಗಿ ಈ ವರ್ಷ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಬೇಡ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಳೆದ ವರ್ಷದಲ್ಲಿ ಇದ್ದ ಪರಿಸ್ಥಿತಿ ಈಗಿಲ್ಲ. ಬೆಕಿದ್ದರೆ ಆಯಾ ಶಾಲಾ ಮಟ್ಟದಲ್ಲಿ ಪರೀಕ್ಷೆ ನಡೆಸಿ ಫಲಿತಾಂಶಗಳನ್ನು ಪ್ರಕಟ ಮಾಡಲಿ. ಆಯಾ ಕಾಲೇಜು ಮಟ್ಟದಲ್ಲಿ ಎಷ್ಟು ಪಠ್ಯ ಬೋಧನೆ ಮಾಡಲಾಗಿದೆ ಅಷ್ಟಕ್ಕೆ ಪರೀಕ್ಷೆ ನಡೆಸಿ ಫಲಿತಾಂಶ ಕೊಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಬಳಿಕವು ಪರೀಕ್ಷೆ ನಡೆಸುವ ಚಿಂತನೆ ಬಿಡಬೇಕು. ವೃತ್ತಿಪರ ಕೋರ್ಸ್ ಗಳಿಗೆ ಪಿಯು ಫಲಿತಾಂಶ ಪರಿಗಣಿಸಲ್ಲ ಆಯಾ ವೃತ್ತಿಪರ ಕೋರ್ಸ್ ಗಳಿಗಾಗಿಯೇ ಪರೀಕ್ಷೆ ಬರೆಯಬೇಕಿದೆ ಹಾಗಾಗಿ ಈ ವರ್ಷ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬೇಡ ಎಂದು ತಿಳಿಸಿದ್ದಾರೆ.