alex Certify BIG NEWS : ರಾಜ್ಯ ಅಗ್ನಿಶಾಮಕ ಇಲಾಖೆಯ ಶೀಘ್ರಲಿಪಿಗಾರ ಹುದ್ದೆಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಅಗ್ನಿಶಾಮಕ ಇಲಾಖೆಯ ಶೀಘ್ರಲಿಪಿಗಾರ ಹುದ್ದೆಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಕಟ

ಬೆಂಗಳೂರು : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಶೀಘ್ರಲಿಪಿಗಾರ’ ಹುದ್ದೆಯ ಉಳಿದ ಮೂಲ ವೃಂದ (Residual parent Cadre) ಮತ್ತು ರಾಜ್ಯ ವ್ಯಾಪಿ ಸ್ಥಳೀಯ ವೃಂದ Cadre) ಜೇಷ್ಟತಾ ಪಟ್ಟಿಗಳನ್ನು ಪರಿಷ್ಕರಿಸಿ ಅಂತಿಮಗೊಳಿಸಿ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿರುವ ‘ಶೀಘ್ರಲಿಪಿಗಾರ’ ವೃಂದವು 1971 ರಿಂದ ದಿನಾಂಕ 25-03-2006 ರವರೆಗೆ ಶೇಕಡ 100 ರಷ್ಟು ಹುದ್ದೆಗಳನ್ನು ನೇರ ನೇಮಕಾತಿಯಿಂದ ತುಂಬಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ದಿನಾಂಕ 26-03-2006 ರಿಂದ 10-09- 2013 ರವರೆಗೆ ಮತ್ತು ದಿನಾಂಕ 11-09-2013 ರಿಂದ ಇಲ್ಲಿಯವರೆಗೆ ಬೆರಳಚ್ಚುಗಾರ ಹುದ್ದೆಗಳಿಂದ ಶೇಕಡ 50% ರಷ್ಟು ಹುದ್ದೆಗಳನ್ನು ಕರ್ನಾಟಕ ನಾಗರೀಕ ಸೇವಾ ನಿಯಮ 1983ರ ಪ್ರಕಾರ ಪದೋನ್ನತಿ ಮೇರೆಗೆ ಹಾಗೂ ನೇರ ನೇಮಕಾತಿಯಿಂದ ಶೇಕಡ 50% ರಷ್ಟು ಹುದ್ದೆಗಳನ್ನು ತುಂಬಲು ಅವಕಾಶ ಕಲ್ಪಿಸಲಾಗಿದೆ. ಇವರುಗಳ ಸೇವಾ ಜೇಷ್ಟತೆಯನ್ನು ಕರ್ನಾಟಕ ಸರ್ಕಾರಿ ನೌಕರರ(ಜೇಷ್ಟತೆ) ನಿಯಮಗಳು 1957ರ 3, 4 ಹಾಗೂ 10ರನ್ವಯ ನಿರ್ಧರಣೆ ಮಾಡಲಾಗಿದೆ.

ಈಗ ಹೊರಡಿಸಿರುವ ಶೀಘ್ರಲಿಪಿಗಾರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿಗೆ ಆಕ್ಷೇಪಣೆಗಳೇನಾದರು ಇದ್ದಲ್ಲಿ ಈ ಪಟ್ಟಿಯನ್ನು ಹೊರಡಿಸಿದ 10 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಆಕ್ಷೇಪಣೆಗಳನ್ನು ಸಲ್ಲಿಸುವ ಭಾಧಿತನೌಕರರು ಆಕ್ಷೇಪಣೆಗಳಿಗೆ ಪೂರಕವಾದ ಮತ್ತು ಸಮರ್ಥನೀಯವಾದ ದಾಖಲೆ ಪ್ರತಿಗಳನ್ನು ದೃಢೀಕರಿಸಿ ಲಗತ್ತಿಸಿ ಸಲ್ಲಿಸಿದಲ್ಲಿ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಜಾತಿ, ಹುಟ್ಟಿದ ದಿನಾಂಕ ಮತ್ತು ಹುದ್ದೆಗೆ ಕಾರ್ಯವರದಿ ಮಾಡಿಕೊಂಡ ದಿನಾಂಕಗಳ ಆಕ್ಷೇಪಣೆಗಳಿದ್ದಲ್ಲಿ ಸೇವಾ ಪುಸ್ತಕದಲ್ಲಿನ ಉಧೃತ ಭಾಗದ ಪ್ರತಿಯನ್ನು ದೃಢೀಕರಿಸಿ ಸಲ್ಲಿಸುವುದು. ನಿಗಧಿಪಡಿಸಿದ ಕಾಲಮಿತಿಯ ನಂತರ ಸ್ವೀಕರಿಸುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...