ಬೆಂಗಳೂರು : ಮಾರ್ಚ್ 2025 ರಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳುವ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಉಲ್ಲೇಖಿತ ಸರ್ಕಾರದ ಆದೇಶಗಳನ್ವಯ ಪಿಯುಸಿ ಶಿಕ್ಷಣ ಬೋಧಿಸುವ ರಾಜ್ಯದಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಾತ್ರ ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.
1. ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳಲು ಕಡ್ಡಾಯವಾಗಿ ಇರಬೇಕಾದ ಅರ್ಹತೆಗಳು ಹಾಗೂ ಸೂಚನೆಗಳು:
1. ದಿನಾಂಕ: 31-03-2025 ಕ್ಕೆ 17 ವರ್ಷಗಳು ತುಂಬಿರಬೇಕು. (31-03-2008 ರಂದು ಅಥವಾ ಅದಕ್ಕಿಂತ ಹಿಂದೆ ಜನಿಸಿರಬೇಕು. (ಉಲ್ಲೇಖ-4ರ ಆದೇಶದಂತೆ)
2. ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ/ಸಿ.ಬಿ.ಎಸ್.ಇ/ಐ.ಸಿ.ಎಸ್.ಇ/ಎನ್.ಐ.ಓ.ಎಸ್.ಗಳಲ್ಲಿ ವ್ಯಾಸಂಗ ಮಾಡಿ 2024 ರ ಆಗಸ್ಟ್ ಅಥವಾ ಅದಕ್ಕೂ ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
3. ಇತರೆ ರಾಜ್ಯಗಳ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ/10ನೇ ತರಗತಿ ಪರೀಕ್ಷೆ ತೆಗೆದುಕೊಂಡು, ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಥವಾ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ತೇರ್ಗಡೆ ಹೊಂದಿರಬೇಕು ಹಾಗೂ 2024ರ ಆಗಸ್ಟ್ ಅಥವಾ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
4.ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ದಾಖಲಾತಿ ಮಾರ್ಗಸೂಚಿ ಪಟ್ಟಿಯಲ್ಲಿರುವ ಸೆಕೆಂಡರಿ ಎಜುಕೇಷನ್ ಬೋರ್ಡ್ಗಳಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ದ್ವಿತೀಯ ಪಿಯುಸಿಗೆ ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ.
5. ಪ್ರಥಮ ಪಿಯುಸಿ ಅನುತ್ತೀರ್ಣರಾದವರು, ಪರೀಕ್ಷೆಗೆ ಹಾಜರಾಗದವರು, ವ್ಯಾಸಂಗವನ್ನು ಮುಂದುವರಿಸದವರು ಖಾಸಗಿ ಅಭ್ಯರ್ಥಿಯಾಗಿ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳಬಹುದಾಗಿದೆ. ಹೊರ ರಾಜ್ಯದಲ್ಲಿ 10ನೇ ತರಗತಿ ಉತ್ತೀರ್ಣರಾಗಿ ಕರ್ನಾಟಕದಲ್ಲಿ ಪ್ರಥಮ ಪಿಯುಸಿ ದಾಖಾಲಾತಿ ಪಡೆದು ವ್ಯಾಸಂಗ ಮುಂದುವರೆಸದವರು (discontinued) ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಲು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ನೀಡುವ ಪ್ರಥಮ ಪಿಯುಸಿ ಸ್ಯಾಟ್ಸ್ ನಂಬರ್ ಕಡ್ಡಾಯವಾಗಿ ನೀಡುವುದು.
6. ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಐ.ಟಿ.ಐ, ಜೆಓಸಿ, ಡಿಪ್ಲೊಮೊ ಇತ್ಯಾದಿ ತರಗತಿಗಳಿಗೆ ದಾಖಲಾಗಿ ಅನುತ್ತೀರ್ಣಗೊಂಡು ಅಲ್ಲಿ ವ್ಯಾಸಂಗ ಮುಂದುವರೆಸದವರು ಖಾಸಗಿ ಅಭ್ಯರ್ಥಿಯಾಗಿ ತಮ್ಮ ಹೆಸರನ್ನು ನೊಂದಾಯಿಸಲು ಅರ್ಹರಾಗಿರುತ್ತಾರೆ. ದ್ವಿತೀಯ ಪಿಯಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಸಂಯೋಜನೆ ಹೊರತುಪಡಿಸಿ, ಬೇರೆ ಅಂದರೆ ಕಲಾ ಅಥವಾ ವಾಣಿಜ್ಯ ಸಂಯೋಜನೆಯಲ್ಲಿ ಖಾಸಗಿ ಅಭ್ಯರ್ಥಿಯಾಗಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹಾಗೂ ಐಟಿಐ, ಜೆಓಸಿ, ಡಿಪ್ಲೊಮೊ ಇತ್ಯಾದಿ ತರಗತಿಗಳಲ್ಲಿ ಉತ್ತೀರ್ಣರಾದವರೂ ಸಹ ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಿಕೊಳ್ಳಬಹುದು.
7. ಅಂಧ ವಿದ್ಯಾರ್ಥಿಗಳಿಗೆ ವಾಸಸ್ಥಳ/ಉದ್ಯೋಗ ಸ್ಥಳ/ಅಂಧ ಶಾಲೆ ಇರುವ ಸ್ಥಳದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಲು ಅವಕಾಶ ನೀಡಲಾಗಿದೆ.
8. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭ್ಯರ್ಥಿಯು ತನ್ನ ವಾಸಸ್ಥಾನಕ್ಕೆ ಹತ್ತಿರವಾಗಿರುವ ಅಥವಾ
ಉದ್ಯೋಗ ಮಾಡುವ ಸ್ಥಳಕ್ಕೆ ಸಮೀಪದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾತ್ರ ಖಾಸಗಿ
ಅಭ್ಯರ್ಥಿಯಾಗಿ ನೊಂದಾಯಿಸಿಕೊಳ್ಳಬಹುದು.
9. ವಾಸಸ್ಥಳದ ಖಾತರಿಗಾಗಿ ವಾಸಸ್ಥಳದ ವಿಳಾಸದ ವಿವರವಿರುವ ಈ ಕೆಳಗಿನ ಯಾವುದಾದರೂ ಒಂದು ದೃಢೀಕರಿಸಿದ ದಾಖಲೆಯನ್ನು ಸಲ್ಲಿಸುವುದು.
• ಮತದಾರರ ಗುರುತಿನ ಚೀಟಿ
. ಪಡಿತರ ಚೀಟಿ
• ಬ್ಯಾಂಕ್ ಪಾಸ್ ಬುಕ್
• ಡ್ರೈವಿಂಗ್ ಲೈಸೆನ್ಸ್
10. ಖಾಸಗಿ ಅಭ್ಯರ್ಥಿಗಳು ಆಧಾರ್ ಕಾರ್ಡ್ನ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.
11. ದ್ವಿಪ್ರತಿ ವರ್ಗಾವಣೆ ಪತ್ರದ ಆಧಾರದ ಮೇಲೆ ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಿಕೊಳ್ಳಲು ಬಂದಾಗ ಪ್ರಾಂಶುಪಾಲರು ತಮ್ಮ ಹಂತದಲ್ಲಿಯೇ ಪರಿಶೀಲಿಸಿ 20 ರೂಗಳ ಛಾಪಾ ಕಾಗದದಲ್ಲಿ ಮಂಡಲಿಯಿಂದ ಒದಗಿಸಿರುವ ನಿಗದಿತ ನಮೂನೆಯಲ್ಲಿ ಅಭ್ಯರ್ಥಿಯಿಂದ ದೃಢೀಕರಣ ಪಡೆಯುವುದು. (ದೃಢೀಕರಣ ಪತ್ರದ ಮಾದರಿಯನ್ನು ಸುತ್ತೋಲೆಯೊಂದಿಗೆ ಲಗತ್ತಿಸಿದೆ)