ಹುಬ್ಬಳ್ಳಿ: ಎಸ್ ಡಿ ಪಿ ಐ ಸಂಘಟನೆಯ ಹಿಂದೆ ಕಾಂಗ್ರೆಸ್ ನಾಯಕರ ಬೆಂಬಲವಿದೆ. ಈ ಸಂಘಟನೆ ಕಾಂಗ್ರೆಸ್ ಬೆಳೆಸಿದ ಕೂಸು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಎಸ್ ಡಿ ಪಿ ಐ, ಪಿಎಫ್ ಐ ಇವು ಕಾಂಗ್ರೆಸ್, ಕಮ್ಯೂನಿಸ್ಟ್ ರು ಬೆಳೆಸಿದ ಕೂಸು. ಈ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಸಂಘಟನೆಗಳ ಮೇಲಿನ ಕೇಸ್ ಗಳನ್ನು ವಜಾ ಮಾಡಿದ್ದರು. ಇದು ತುಷ್ಟೀಕರಣದ ಪರಾಕಾಷ್ಠೆ ಎಂದು ವಾಗ್ದಾಳಿ ಕಿಡಿಕಾರಿದ್ದಾರೆ.
ಇದೇ ವೇಳೆ ಆರ್.ಎಸ್.ಎಸ್ ಮೂಲ ಪ್ರಶ್ನಿಸಿರುವ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ತಿರುಗೇಟು ನೀಡಿರುವ ಪ್ರಹ್ಲಾದ್ ಜೋಶಿ, ಆರ್.ಎಸ್.ಎಸ್ ಮೂಲ, ಬಿಜೆಪಿ ಮೂಲವನ್ನು ಕೇಳುವ ಸಿದ್ದರಾಮಯ್ಯನವರ ಮೂಲವನ್ನೇ ಜನ ಕಿತ್ತುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.