ಬೆಂಗಳೂರು : ಡ್ರೋನ್ ಪ್ರತಾಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಲೈಸೆನ್ಸ್ ಪಡೆಯದೇ ಡ್ರೋನ್ ಮಾರಾಟ ಮಾಡಿದ ಹಿನ್ನೆಲೆ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಡ್ರೋನ್ ಪ್ರತಾಪ್ ವಿರುದ್ಧ ಬನಶಂಕರಿಯ ಪರಮೇಶ್ವ್ ಎಂಬುವವರ ರಾಜ ರಾಜೇಶ್ವರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರತಾಪ್ ಅವರ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಡಿಜಿಸಿಎ (ನಾಗರೀಕ ವಿಮಾನಯಾನ ಇಲಾಖೆ) ಅಧಿಕೃತವಾಗಿ ಪರವಾನಗಿ ಹೊಂದಿಲ್ಲ , ಲೈಸೆನ್ಸ್ ಪಡೆಯದೇ ಡ್ರೋನ್ ಹಾರಿಸುವುದು ಹಾಗೂ ಡ್ರೋನ್ ಮಾರಾಟ ಮಾಡುವುದು ಅಪರಾಧ ಎಂದು ದೂರು ನೀಡಿದ್ದಾರೆ. ಲೈಸೆನ್ಸ್ ಪಡೆಯದೇ ಜನರಿಗೆ ಡ್ರೋನ್ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಮೂಲಕ ಪ್ರತಾಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಕ್ವಾಲಿಟಿ ಇಲ್ಲದ ಡ್ರೋನ್
ಬಿಗ್ ಬಾಸ್ ಸ್ಪರ್ಧಿ ‘ಡ್ರೋನ್ ಪ್ರತಾಪ್’ ಕ್ವಾಲಿಟಿ ಇಲ್ಲದ ಡ್ರೋನ್ ಕೊಟ್ಟು ಲಕ್ಷಾಂತರ ಹಣ ಮೋಸ ಮಾಡಿರುವ ಆರೋಪ ಇತ್ತೀಚೆಗೆ ಕೇಳಿಬಂದಿತ್ತು.
ಮಹಾರಾಷ್ಟ್ರ ಮೂಲದ ವ್ಯಕ್ತಿ ಓರ್ವರಿಂದ ಸುಮಾರು 35 ಲಕ್ಷ 75 ಸಾವಿರ ಹಣ ಪಡೆದು ಕ್ವಾಲಿಟಿ ಇಲ್ಲದ ಹಾಗೂ ಸರಿಯಾಗಿ ಕೆಲಸ ಮಾಡದ ಡ್ರೋನ್ ಗಳನ್ನು ನೀಡಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು, ಪ್ರತಾಪ್ ಬ್ಯುಸಿನೆಡ್ ಪಾರ್ಟ್ನರ್ ಸಾರಂಗ ಮಾನ್ ಎಂಬುವವರು ಈ ಆರೋಪ ಮಾಡಿದ್ದರು. 8 ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಗೆ ನಾನು 35, 75,000 ರೂ ಹಣ ನೀಡಿದ್ದೆ, ಆದರೆ ಪ್ರತಾಪ್ ನನಗೆ ಸರಿಯಾದ ಡ್ರೋನ್ ನೀಡಲಿಲ್ಲ. ಡ್ರೋನ್ ಕ್ವಾಲಿಟಿ, ಗುಣಮಟ್ಟ ಸರಿಯಿಲ್ಲ ಎಂದು ಸಾರಂಗ್ ಆರೋಪ ಮಾಡಿದ್ದರು.
ಫೆ.20 ರಂದು ಸಮನ್ಸ್
ಬಿಗ್ ಬಾಸ್’ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ 2.50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಈ ಸಂಬಂಧ ಕೋರ್ಟ್ ನಿಂದ ಸಮನ್ಸ್ ಜಾರಿಯಾಗಿದ್ದು, ಫೆ.20 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಡ್ರೋನ್ ಪ್ರತಾಪ್ ಹೇಳಿದ್ದರು. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ತಲೆಗೆ ಹೊಡೆದು ತೊಂದರೆ ಕೊಟ್ಟಿದ್ದರು. ಹುಚ್ಚ ಎಂದು ಹೇಳಿದ್ದರು. ಅಲ್ಲದೇ ಹುಚ್ಚ ಅಂತ ಪೇಪರ್ ಗೆ ಸಹಿ ಹಾಕು ಎಂದು ಒತ್ತಾಯಿಸಿದ್ದರು ಎಂದು ಪ್ರತಾಪ್ ಬಿಬಿಎಂಪಿ ನೋಡಲ್ ಅಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.