ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ‘ಸಂಬಳ ಪ್ಯಾಕೇಜ್ ಖಾತೆ’ ಕಡ್ಡಾಯಗೊಳಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾಯ೯ ನಿವ೯ಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಸಂಬಳ ಪ್ಯಾಕೇಜ್ ನೋಂದಾಯಿಸಲು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಸಂಬಳ ಖಾತೆಯನ್ನು ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಪರಿವರ್ತಿಸಲು/ನೋಂದಾಯಿಸಲು ಸೂಚಿಸಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (01) ರ ಸರ್ಕಾರಿ ಆದೇಶದನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳು ತಪ್ಪದೇ ತಮ್ಮ ಸಂಬಳ ಖಾತೆಯನ್ನು ಕಡ್ಡಾಯವಾಗಿ ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಬ್ಯಾಂಕ್ಗಳ ಮೂಲಕ ಪರಿವರ್ತಿಸಿಕೊಳ್ಳಲು/ನೋಂದಾಯಿಸಿಕೊಳ್ಳಲು ಸೂಚಿಸಲಾಗಿರುತ್ತದೆ. ಅದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿಯಲ್ಲಿ ಬರುವ ಎಲ್ಲಾ ಹಂತದ ವೇತನ ಸೆಳೆಯುವ ಬಟಾವಡೆ ಅಧಿಕಾರಿಗಳು (ಡಿ ಡಿ ಒ) ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಅಧೀನದಲ್ಲಿ ಬರುವ ಕಛೇರಿ/ಆಸ್ಪತ್ರೆ (ಪ್ರಾ.ಆ.ಕೇಂದ್ರ /ಸ.ಆ.ಕೇಂದ್ರ/ ಸಾರ್ವಜನಿಕ ಆಸ್ಪತ್ರೆ/ ಎಂ.ಸಿ.ಹೆಚ್ /ಡಿ.ಹೆಚ್.ಒ/ ಟಿ.ಹೆಚ್.ಓ ಕಛೇರಿಗಳನ್ನೊಳಗೊಂಡಂತೆ) ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಪ್ರಸ್ತುತ ಚಾಲ್ತಿಯಲ್ಲಿರುವ ಸಂಬಳ ಖಾತೆಗಳನ್ನು ಬ್ಯಾಂಕ್ಗಳ ಮೂಲಕ ಸಂಬಳ ಪ್ಯಾಕೇಜ್ ಖಾತೆಗಳನ್ನಾಗಿ ಕಡ್ಡಾಯವಾಗಿ ಪರಿವರ್ತಿಸಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.
a) PMJJBY – ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಡಿಯಲ್ಲಿ ವಾರ್ಷಿಕ ರೂ 436 ಪ್ರೀಮಿಯಂ ನಲ್ಲಿ ಅವಧಿ ವಿಮಾ (Term Insurance) ಯೋಜನ ಸೌಲಭ್ಯವಿರುತ್ತದೆ.
b) PMSBY ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ವಾರ್ಷಿಕ ರೂ 20
ಪ್ರೀಮಿಯಂನಲ್ಲಿ ಅಪಘಾತ ವಿಮಾ (Accidental Insurance) ಯೋಜನೆ ಸೌಲಭ್ಯವಿರುತ್ತದೆ.
ಎಲ್ಲಾ ಡಿ.ಡಿ.ಒ ಅಧಿಕಾರಿಗಳು ಈ ಮೇಲ್ಕಂಡ ಸೌಲಭ್ಯಗಳ ಯೋಜನೆಗಳಡಿಯಲ್ಲಿ ತಮ್ಮ ಅಧೀನದಲ್ಲಿ ಬರುವ ಅಧಿಕಾರಿ/ಸಿಬ್ಬಂದಿಗಳು ಅರ್ಹತೆಗನುಸಾರ ನೋಂದಾಯಿಸಿಕೊಳ್ಳಲು ಕ್ರಮವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಲ್ಲೇಖ (1) ರ ಸರ್ಕಾರಿ ಆದೇಶವನ್ನು ಗಮನಿಸಬಹುದಾಗಿರುತ್ತದೆ. ಮುಂದುವರೆದು ಸದರಿ ಸರ್ಕಾರಿ ಆದೇಶವನ್ನು ಜಾರಿಗೊಳಿಸುವಲ್ಲಿ ವಿಳಂಬವಾದಲ್ಲಿ ಸಂಬಂಧಪಟ್ಟ ವೇತನ ಸೆಳೆಯುವ ಬಟಾವಡೆ ಅಧಿಕಾರಿಗಳು (ಡಿ ಡಿ ಒ) ಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದೆಂದು ಈ ಮೂಲಕ ತಿಳಿಸಿದೆ.
