ತುಮಕೂರು: ಆರ್ ಟಿ ಐ ಮಾಹಿತಿ ನೀಡದೇ ನಿರ್ಲಕ್ಷ್ಯ ಮೆರೆದಿದ್ದ ತುಮಕೂರು ತಹಶೀಲ್ದಾರ್ ಗೆ ದಂಡ ವಿಧಿಸಿ ರಾಜ್ಯ ಮಾಹಿತಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ತುಮಕೂರು ತಹಶೀಲ್ದಾರ್ ಮೋಹನ್ ಕುಮಾರ್ 2 ವರ್ಷ ಕಳೆದರೂ ಆರ್ ಟಿ ಐ ಅರ್ಜಿಗೆ ಮಾಹಿತಿ ನೀಡದೆ ನಿರ್ಲಕ್ಷ ಮೆರೆದಿದ್ದರು. ಆರ್ ಟಿ ಐ ಮಾಹಿತಿ ನೀಡುವಂತೆ ಮೂರು ಬಾರಿ ನೋಟೀಸ್ ನೀಡಿದ್ದರೂ ಕೂಡ ಉತ್ತರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ.
ತಹಶೀಲ್ದಾರ್ ವೇತನದಲ್ಲಿ 10 ಸಾವಿರ ರೂಪಾಯಿ ಕಡಿತ ಮಾಡುವಂತೆ ಮಾಹಿತಿ ಆಯೋಗದ 6ನೇ ನ್ಯಾಯಾಲಯ ಆದೇಶ ಹೊರಡಿಸಿದೆ.