ಬೆಂಗಳೂರು: ಆರ್ ಎಸ್ ಎಸ್ ನ್ನು ನಿಷೇಧಿಸಲಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ನವರದ್ದು ’ಬೆಕ್ಕಿನ ಕಣ್ಣಲಿ ಇಲಿ’ ಎನ್ನುವ ಹಾಗೆ ಯಾವಾಗಲೂ ಆರ್ ಎಸ್ ಎಸ್ ಮೇಲೆಯೇ ಕಣ್ಣು ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಆರ್ ಎಸ್ ಎಸ್ ನ್ನು ಯಾಕೆ ಬ್ಯಾನ್ ಮಾಡಬೇಕು? ದೇಶದಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದಕ್ಕೆ? ಹತ್ತು ಹಲವು ಸಂಸ್ಥೆಗಳನ್ನು ಕಟ್ಟಿ ಬಡವರಿಗೆ ಸಹಾಯ ಮಾಡುತ್ತಿರುವುದಕ್ಕೆ? ಯಾವ ಕಾರಣಕ್ಕೆ ಆರ್ ಎಸ್ ಎಸ್ ಬ್ಯಾನ್ ಮಾಡಬೇಕು? ಸಿದ್ದರಾಮಯ್ಯ ಹೇಳಿಕೆಯೇ ಅರ್ಥಹೀನ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಪಿ ಎಫ್ ಐ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯ ಅವರ ನಡೆಗೆ ಇದೇ ಸಾಕ್ಷಿ. ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿರುವ ಆರ್ ಎಸ್ ಎಸ್ ನ್ನು ಬ್ಯಾನ್ ಮಾಡಬೇಕು ಎಂಬುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.