ಬೆಂಗಳೂರು: ರಾಜ್ಯದ ನೆಮ್ಮದಿ ಕೆಡಿಸುವ ಯಾವುದೇ ಸಂಘಟನೆಯಾಗಿರಬಹುದು ಅದನ್ನು ನಿಷೇಧಿಸಲು ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕಲ್ಲ ಎಂದು ನೂತನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೋಮು ವಿಷಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಂಡರೆ, ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ನೆಮ್ಮದಿ ಕೆಡಿಸುವಂತಹ ಯಾವುದೇ ಸಂಘಟನೆಯಾಗಿರಲಿ ಕಾನೂನು ಚೌಕಟ್ಟಿನಲ್ಲಿ ಅಂಥಾ ಸಂಘಟನೆ ಕಟ್ಟಿ ಹಾಕ್ತೀವಿ. ಬಜರಂಗದಳ ಆಗಿರಬಹುದು, ಪಿಎಫ್ ಐ ಆಗಿರಬಹುದು ಅಥವಾ ಆರ್.ಎಸ್.ಎಸ್ ಸಂಘಟನೆ ಆಗಿರಬಹುದು. ಅಂಥಾ ಸಂಘಟನೆ ನಿಷೇಧ ಮಾಡಲು ಹಿಂದೇಟು ಹಾಕಲ್ಲ. ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಆರ್.ಎಸ್.ಎಸ್ ಬ್ಯಾನ್ ಗೂ ಹಿಂದೇಟು ಹಾಕಲ್ಲ ಎಂಬ ನೂತನ ಸಚಿವರ ಹೇಳಿಕೆ ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.