alex Certify BIG NEWS: RSS ನವರು ಮೂಲ ಭಾರತದವರಾ….? ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: RSS ನವರು ಮೂಲ ಭಾರತದವರಾ….? ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಇವತ್ತಿನ ಪ್ರಧಾನಿ ಮೋದಿಗೆ ನೆಹರೂ ಹೋಲಿಕೆ ಸರಿಯಲ್ಲ. ಜವಾಹರ ಲಾಲ್ ನೆಹರು ಎಲ್ಲಿ? ನರೇಂದ್ರ ಮೋದಿ ಎಲ್ಲಿ? ನೆಹರು ಸಾಧನೆಗಳನ್ನು ಅಳಿಸುವ ಕೆಲಸ ಇವರು ಮಾಡುತ್ತಿದ್ದಾರೆ. ಪಂಚವಾರ್ಷಿಕ ಯೋಜನೆ ತೆಗೆದು ನೀತಿ ಆಯೋಗ ಮಾಡಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯೋಜನೆಗಳ ಹೆಸರು ಬದಲಾವಣೆ ಮಾಡುವುದು, ಸಂಘ ಸಂಸ್ಥೆಗಳನ್ನು ತಮ್ಮ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವುದು, ಆರ್ ಬಿಐ ನ್ನೇ ನಿಷ್ಕ್ರಿಯಗೊಳಿಸಿದ್ದು, ನೀತಿ ಆಯೋಗ ಕೇಂದ್ರದ ಕೈಗೊಂಬೆಯನ್ನಾಗಿ ಮಾಡಿದ್ದೇ ಇವರ ಸಾಧನೆಯಾಗಿದೆ ಎಂದು ಗುಡುಗಿದರು.

ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಸೇರ್ಪಡೆ ಮಾಡುವ ಮೂಲಕ ಪಕ್ಷದ ಅಜೆಂಡಾ ಸಾಧಿಸಲು ಹೊರಟಿದ್ದಾರೆ. ದೇಶದಲ್ಲಿ ಮಂದಿರಗಳು ಎಲ್ಲಿತ್ತು? ಮಸೀದಿಗಳಲ್ಲಿ ಏನಿತ್ತು? ಮಸೀದಿಯಲ್ಲಿ ದೇವರ ಮೂರ್ತಿಗಳಿದ್ದವು ಎಂದು ಅದನ್ನು ಕೆದಕುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಶ್ನೆ ಮಾಡಿದರೆ ನೀವು ಈ ದೇಶದವರೇ ಅಲ್ಲ ನಿಮ್ಮ ಮೂಲ ಯಾವುದು? ಎಂದು ಚರ್ಚೆ ಆರಂಭಿಸುತ್ತಾರೆ. ಈ ಬಗ್ಗೆ ಮಾತನಾಡಬಾರದು ಎಂದು ಇದುವರೆಗೂ ಸುಮ್ಮನಿದ್ದೆ. ಹಾಗಾದರೆ ಆರ್ ಎಸ್ ಎಸ್ ನವರ ಮೂಲ ಯಾವುದು? ಅವರು ಮೂಲ ಭಾರತದವರೇ? ಈ ಬಗ್ಗೆಯೂ ನಾವು ಕೆದಕಬಹುದು ಎಂದು ಟಾಂಗ್ ನೀಡೀದರು.

ಆರ್ಯನ್ನು ಭಾರತೀಯರಾ? ಇವರೇನು ದ್ರಾವಿಡರಾ? ಆರ್ ಎಸ್ ಎಸ್ ನವರು ಮೂಲ ಭಾರತೀಯರಲ್ಲ ಎಂಬುದನ್ನು ಈ ಹಿಂದೆ ಸಂಸತ್ತಿನಲ್ಲಿಯೂ ಸ್ಪಷ್ಟಪಡಿಸಲಾಗಿತ್ತು. ಆದರೆ ಇಂಥಹ ವಿಚಾರಗಳ ಚರ್ಚೆ ಬೇಡ. ನಾವು ಈ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆಯೆ ಮುಗಿ ಬೀಳುವ ಕೆಲಸವಾಗುತ್ತೆ ಎಂಬುದು ನಮಗೆ ಗೊತ್ತಿದೆ. ಆದರೆ ಚರಿತ್ರೆಗಳನ್ನು, ಇತಿಹಾಸಗಳನ್ನು ಕೆದಕುತ್ತಾ ಹಿಂದೆ ಹೋಗುವ ಕೆಲಸ ಮಾಡಬಾರದು ಇದರಿಂದ ಆಗುವ ಬೆಳವಣಿಗೆಯಾದರೂನು? ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತೆ, ಕಂದಕಗಳು ಆರಂಭವಾಗುತ್ತೆ. ಇಂಥದ್ದನ್ನೆಲ್ಲ ಬಿಟ್ಟು ಮುಂದೆ ಹೋಗುವ ಪ್ರಯತ್ನ ಮಾಡಬೇಕು ಎಂದರು.

600 ವರ್ಷ ಮೊಘಲರು ದೇಶ ಆಳಲು ಕಾರಣ ಯಾರು? 200 ವರ್ಷ ಬ್ರೀಟೀಷರು ಈ ದೇಶದಲ್ಲಿ ಆಡಳಿತ ನಡೆಸಲು ಕಾರಣರು ಯಾರು? ಎಲ್ಲರೂ ಒಗ್ಗಟ್ಟಿನಿಂದ ಇದ್ದಿದ್ದರೆ ಅವರೇಕೆ ಇಲ್ಲಿಂದು ಆಳುತ್ತಿದ್ದರು? ಈ ಬಗ್ಗೆಯೂ ವಿಚಾರ ಮಾಡಬೇಕಲ್ಲವೇ? ಎಂದು ಕೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...