ಹುಬ್ಬಳ್ಳಿ: ಆರ್.ಎಸ್.ಎಸ್. ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಆರ್.ಎಸ್.ಎಸ್ ಎಂಬುದು ಒಂದು ಕೋಮುವಾದಿ ಸಂಘಟನೆ. ದೇಶದಲ್ಲಿ ಅಶಾಂತಿ ಸೃಷ್ಟಿಸುವುದೇ ಅದರ ಉದ್ದೇಶ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಆಧಾರ್-ಪಾನ್ ಹೊಂದಿರುವವರು ಈಗ್ಲೇ ಮಾಡಿ ಈ ಕೆಲಸ
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವುದೇ ಆರ್.ಎಸ್.ಎಸ್. ಕೆಲಸ. ದೇಶದಲ್ಲಿರುವ ಹಿಂದೂಗಳು ಹಾಗೂ ಮುಸ್ಲಿಂರ ಭಾವನೆಗಳನ್ನು ಕೆದಕಿ ಪರಸ್ಪರ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಜಾತಿ, ಧರ್ಮಗಳ ನಡುವೆ ತಾರತಮ್ಯವನ್ನು ಸೃಷ್ಟಿಸುತ್ತಿದೆ. ಆದರೆ ಕಾಂಗ್ರೆಸ್ ನಲ್ಲಿ ಹಾಗಿಲ್ಲ. ಹಿಂದೂ, ಮುಸ್ಲಿಂ, ಸಿಖ್, ಜೈನರು ಹೀಗೆ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತೇವೆ. ಎಲ್ಲರಿಗೂ ಸಮಾನ ಅವಕಾಶ ನೀಡುವುದೇ ನಮ್ಮ ಉದ್ದೇಶ ಎಂದರು.
BIG NEWS: ʼಸೆಕ್ಸ್ʼ ಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಯುವಜನರ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ
ಬಿಜೆಪಿ ಎಂದರೆ ಆರ್.ಎಸ್.ಎಸ್. ಮುಖವಾಡ. ಆರ್ ಎಸ್.ಎಸ್. ಮುಖಂಡರು ಏನು ನಿರ್ದೇಶಿಸುತ್ತಾರೋ ಅದನ್ನು ಬಿಜೆಪಿಯವರು ಮಾಡುತ್ತಾರೆ. ಹಾಗಾಗಿ ಬಿಜೆಪಿ ಸರ್ಕಾರ ಎಂಬುದು ಆರ್.ಎಸ್.ಎಸ್. ನಾಯಕರ ಕೈಗೊಂಬೆ ಎಂದು ವಾಗ್ದಾಳಿ ನಡೆಸಿದರು.