ಹೊಸಪೇಟೆ : ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಜುಲೈ 9 ರ ಇಂದಿನಿಂದ ಜು. 12 ರವರೆಗೆ ಕಲ್ಚರಲ್ ಗ್ರೂಪ್ ಆಫ್ ಮೀಟಿಂಗ್, ಜು.13 ರಿಂದ 16 ರವರೆಗೆ ಶೆರ್ಪಾ ಸೇರಿ ಎರಡು ಹಂತದ ಸಭೆಗಳು ನಡೆಯಲಿವೆ.
ಹಂಪಿಯಲ್ಲಿ ಜುಲೈ 9 ರಿಂದ 16 ರವರೆಗೆ ನಡೆಯಲಿರುವ ಮೂರನೇ ಜಿ 20 ಸಂಸ್ಕೃತಿ ಕಾರ್ಯ ಗುಂಪು ಮತ್ತು ಮೂರನೇ ಜಿ 20 ಶೆರ್ಪಾ ಸಭೆಗಳಲ್ಲಿ ಜಿ 20 ಸದಸ್ಯ ರಾಷ್ಟ್ರಗಳು ಸೇರಿದಂತೆ 43 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಶನಿವಾರ ನೀತಿ ಆಯೋಗದ ಸಿಇಒ ಮತ್ತು ಶೆರ್ಪಾ ಮೀಟ್ ಮುಖ್ಯಸ್ಥ ಅಮಿತಾಭ್ ಕಾಂತ್ ಹಂಪಿಗೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದರು. ಸಿದ್ಧತೆಗಳ ಬಗ್ಗೆ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಭಾರತದ ಜಿ 20 ಪ್ರೆಸಿಡೆನ್ಸಿಯ ಥೀಮ್ – ‘ವಸುದೈವ ಕುಟುಂಬಕಂ’ ಜುಲೈ 9 ರಿಂದ 16 ರವರೆಗೆ ಹಂಪಿಯಲ್ಲಿ ಮೂರನೇ ಜಿ 20 ಸಂಸ್ಕೃತಿ ಕಾರ್ಯ ಗುಂಪು ಮತ್ತು ಮೂರನೇ ಜಿ 20 ಶೆರ್ಪಾ ಸಭೆಗಳು ನಡೆಯಲಿವೆ. ಸಿದ್ಧತೆಗಳ ಬಗ್ಗೆ ನಾನು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ” ಎಂದು ಕಾಂತ್ ಹೇಳಿದರು.