alex Certify BIG UPDATE : ರಾಜ್ಯದ ‘ಪಡಿತರ ಚೀಟಿ’ದಾರರೇ ಗಮನಿಸಿ : ರೇಷನ್ ಕಾರ್ಡ್ ತಿದ್ದುಪಡಿ ಕುರಿತು ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG UPDATE : ರಾಜ್ಯದ ‘ಪಡಿತರ ಚೀಟಿ’ದಾರರೇ ಗಮನಿಸಿ : ರೇಷನ್ ಕಾರ್ಡ್ ತಿದ್ದುಪಡಿ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ಪಡಿತರ ಚೀಟಿದಾರರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವ ಸಂಬಂಧ ಡಿ.31 ರವರೆಗೆ ಆಹಾರ ಇಲಾಖೆ ಅವಕಾಶ ನೀಡಿತ್ತು, ನಂತರ ಜ.31 ರವರೆಗೆ  ಮಾತ್ರ ರೇಷನ್ ಕಾರ್ಡ್ ಸೇರ್ಪಡೆ ಹಾಗೂ ಹೊಸ ಸದಸ್ಯರ ಸೇರ್ಪಡೆ ಸಂಬಂಧ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.

ಈ ಹಿನ್ನೆಲೆ ಆಹಾರ ಇಲಾಖೆ ಸ್ಪಷ್ಟನೆ ನೀಡಿದ್ದು,  ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಡ್‌ ಗಳ ತಿದ್ದುಪಡಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಕಾರ್ಡ್ ದಾರರು ಆತಂಕಪಡಬಾರದು. ಪ್ರತಿ ತಿಂಗಳು 1ರಿಂದ 10ನೇ ತಾರೀಖಿನವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ತಿಂಗಳ ಕೊನೆಯ ವಾರದಲ್ಲೂ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಇಲಾಖೆ ಅಧಿಕಾರಿಗಳು ವದಂತಿ ಕುರಿತು ಸ್ಪಷ್ಟಪಡಿಸಿದ್ದಾರೆ.

ತಿದ್ದುಪಡಿ ಮಾಡಿಕೊಳ್ಳುವವರು ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಅಗತ್ಯ ದಾಖಲೆಯೊಂದಿಗೆ ತೆರಳಿ ಆನ್ಲೈನ್ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೆ ಆಧಾರ್ ನೊಂದಿಗೆ ಆದಾಯ ಪ್ರಮಾಣ ಪತ್ರ ನೀಡಬೇಕಿದ್ದು, ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್ಆರ್ ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ ಮಾಡಲಾಗಿದೆ.

ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್ ಬೇಕಾಗುತ್ತದೆ.ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ. ನಿಗದಿಪಡಿಸಿದ ಅವಧಿಯೊಳಗೆ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ. ವಿದ್ಯುತ್ ಬಿಲ್ ದಾಖಲೆ ನೀಡಬೇಕು. ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್ಆರ್ ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ ಮಾಡಲಾಗಿದೆ.

ಏನೆಲ್ಲಾ ಅಪ್ ಡೇಟ್ ಮಾಡಬಹುದು..?

ವಿಳಾಸ ಬದಲಾವಣೆ,
ಕುಟುಂಬಕ್ಕೆ ಸೇರಿದವರ ಹೆಸರು ತೆಗೆಯುವುದು.
ಫೋಟೋ ಮತ್ತು ಬಯೋಮೆಟ್ರಿಲ್ ಅಪ್ಡೇಟ್,
ಕುಟುಂಬ ಸದಸ್ಯರ ಹೆಸರು ತಿದ್ದುಪಡಿ.
ಮನೆ ಯಜಮಾನರ ಬದಲಾವಣೆ,
ಹೊಸ ಸದಸ್ಯರ ಸೇರ್ಪಡೆ

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...