alex Certify BIG NEWS: ರಾಮನಗರ ಜಿಲ್ಲೆ ಮಾಡಿ ಅಭಿವೃದ್ಧಿ ಮಾಡಿದ್ದು ನಾನು; ಈಗ ಬಿಜೆಪಿ-ಕಾಂಗ್ರೆಸ್ ನವರು ವೇದಿಕೆ ಮೇಲೆ ಕಿತ್ತಾಡುತ್ತಿದ್ದಾರೆ; ಕಿಡಿ ಕಾರಿದ ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಮನಗರ ಜಿಲ್ಲೆ ಮಾಡಿ ಅಭಿವೃದ್ಧಿ ಮಾಡಿದ್ದು ನಾನು; ಈಗ ಬಿಜೆಪಿ-ಕಾಂಗ್ರೆಸ್ ನವರು ವೇದಿಕೆ ಮೇಲೆ ಕಿತ್ತಾಡುತ್ತಿದ್ದಾರೆ; ಕಿಡಿ ಕಾರಿದ ಕುಮಾರಸ್ವಾಮಿ

ಮೈಸೂರು: ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಗೂಂಡಾಗಿರಿ ಸಂಸ್ಕೃತಿಯುಳ್ಳವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ, ಇಂಥಹ ಜನಪ್ರತಿನಿಧಿಗಳಿಂದ ಜನರು ಎಚ್ಚರವಾಗಿರಬೇಕು ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿ ಅಭಿವೃದ್ಧಿ ಮಾಡಿದ್ದು ನಾನು ಇಂದು ವೇದಿಕೆ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅಭಿವೃದ್ಧಿ ಮಾಡಿದ್ದು ತಾವೆಂದು ಕಿತ್ತಾಟ ನಡೆಸಿದ್ದಾರೆ. ಜನಪ್ರತಿನಿಧಿಗಳಾದವರು ಜನರ ಸಮಸ್ಯೆ ಬಗೆಹರಿಸುವ ಬದಲು ತಾವೇ ಗಲಾಟೆಗೆ ನಿಂತಿರುವುದು ಬೇಸರ ತಂದಿದೆ ಎಂದರು.

ಕಾಜಿರಂಗ ಉದ್ಯಾನದಲ್ಲಿ ಕಾಣಿಸಿಕೊಂಡ ಅಪರೂಪದ ಜಿಂಕೆ

ನಾನು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ 360 ಕೋಟಿ ಬಿಡುಗಡೆ ಮಾಡಿದ್ದೆ. ನಮ್ಮ ಸರ್ಕಾರ ಕೆಳಗಿಳಿಯುತ್ತಿದ್ದಂತೆ ಜಿಲ್ಲೆಗೆ ಅನುದಾನವನ್ನೇ ನಿಲ್ಲಿಸಿದರು. ಕಾಂಗ್ರೆಸ್ ನವರು 5 ವರ್ಷಗಳ ಕಾಲ ಅಧಿಕಾರದಲ್ಲಿದ್ದರಲ್ಲವೇ? ಆಗ ಮಾಡಿದ್ದಾದರೂ ಏನು? ಎಷ್ಟು ಅನುದಾನ ಬಿಡುಗಡೆ ಮಾಡಿದರು? ಏನು ಅಭಿವೃದ್ಧಿ ಮಾಡಿದರು? ಎಂದು ಪ್ರಶ್ನಿಸಿದರು.

ರಾಮನಗರ ಇಷ್ಟು ದಿನ ಶಾಂತಿಯಿಂದ ಇತ್ತು. ಅಲ್ಲೀಗ ಸರ್ಕಾರಿ ಕಾರ್ಯಕ್ರಮದ ವೇಳೆ ಸಿಎಂ ಎದುರಲ್ಲೇ ಜನಪ್ರತಿನಿಧಿಗಳ ಅಶಾಂತಿ ಸೃಷ್ಟಿಸಿದ್ದಾರೆ ಎಂದರೆ ಜನರಲ್ಲಿ ಭಯಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಗೂಂಡಾಸಂಸ್ಕೃತಿಯಿಂದ ಬಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಜನಪ್ರತಿನಿಧಿಗಳಿಗೆ ತಾಳ್ಮೆ ಇರಬೇಕು. ಇವರ ನಡವಳಿಕೆಯನ್ನು ಜನ ಗಮನಿಸುತ್ತಿದ್ದಾರೆ. ಇದರಿಂದ ಜನರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಅಶ್ವತ್ಥನಾರಾಯಣ ಅವರ ಪದಬಳಕೆ ಸರಿಯಾಗಿಲ್ಲ. ಅವರದ್ದು ದಬ್ಬಾಳಿಕೆ ರಾಜಕೀಯ. ಇವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಇಬ್ಬರು ಜನಪ್ರತಿನಿಧಿಗಳು ನಡೆದುಕೊಂಡಿರುವ ರೀತಿ ಸರಿಯಿಲ್ಲ ಖಂಡನೀಯ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...