ಬೆಂಗಳೂರು: 545 ಪಿ ಎಸ್ ಐ ಹುದ್ದೆ ಅಕ್ರಮ ಮಾಸುವ ಮುನ್ನವೇ ಜವಹರ ಲಾಲ್ ನೆಹರು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.
ಏಪ್ರಿಲ್ 30ರಂದು ನಡೆದಿದ್ದ ತುಮಕೂರಿನ ನವೋದಯ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು 6ನೇ ತರಗತಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿದ್ದು, ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ.
ಜಿಲ್ಲೆಯಾದ್ಯಂತ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಪರೀಕ್ಷಾ ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳ ಬಳಿ ಉತ್ತರವನ್ನು ನೋಡಿಕೊಂಡು ಇತರ ವಿದ್ಯಾರ್ಥಿಗಳಿಗೆ ಬರೆದುಕೊಟ್ಟಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಹೆಸರು, ರೋಲ್ ನಂಬರ್ ಹಾಗೂ ಸಹಿ ಹಾಕದಂತೆ ಒತ್ತಡ ಹೇರಿದ್ದಾರೆ. ಓಎಂಆರ್ ಶೀಟ್ ಗಳನ್ನು ಕೊಠಡಿ ಮೇಲ್ವಿಚಾರಕರೇ ತುಂಬಿದ್ದಾರೆ ಎಂದು ಡಿವೈ ಎಸ್ ಪಿ ಪಾಟೀಲ್ ಅವರಿಗೆ ದೂರು ನೀಡಿದ್ದಾರೆ.