ಕಲಬುರ್ಗಿ: 545 ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾಳೆ.
ಪಿ ಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಲಕ್ಷ ಲಕ್ಷ ಡೀಲ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಒಎಂಆರ್ ಶೀಟ್ ತಿದ್ದುಪಡಿ, ಬ್ಲ್ಯೂಟೂತ್ ಮೂಲಕವೂ ಅಕ್ರಮ ನಡೆದಿದೆ. ಆರ್.ಡಿ.ಪಾಟೀಲ್, ಮಂಜುನಾಥ್ ಮೇಳಕುಂದಿ, ಪಾಟೀಲ್ ಸೂತ್ರಧಾರರು ಎಂದು ಜ್ಞಾನಜ್ಯೋತಿ ಶಾಲೆ ಮುಖ್ಯಸ್ಥೆ, ಆರೋಪಿ ದಿವ್ಯಾ ತಿಳಿಸಿದ್ದಾಳೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ
ಮುಖ್ಯೋಪಾಧ್ಯಾಯ ಕಾಶಿನಾಥ್ ಪಾತ್ರ ಕೂಡ ಅಕ್ರಮದಲ್ಲಿ ಪ್ರಮುಖವಾಗಿದೆ. ಪ್ರೀಪ್ಲಾನ್ ಮಾಡಿಕೊಂಡು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆಸಲಾಗಿದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ತಿಳಿದುಬಂದಿದೆ.