ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಪೊಲಿಸರು ಹೆಡ್ ಕಾನ್ಸ್ ಟೇಬಲ್ ಓರ್ವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಗಿರಿನಗರ ಠಾಣೆ ಹೆಡ್ ಕಾನ್ಸ್ ಟೇಬಲ್ ಮಮತೇಶ್ ಗೌಡ ಬಂಧಿತ ಆರೋಪಿ. ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಓಎಂಆರ್ ಶೀಟ್ ಅಕ್ರಮದಲ್ಲಿ ಮಮತೇಶ್ ಗೌಡ ಭಾಗಿಯಾಗಿರುವ ಬಗ್ಗೆ ಹೈಗ್ರೌಂಡ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಖಲಿಸ್ತಾನದ ಬೇಡಿಕೆ ‘ಸಾಂವಿಧಾನಿಕ ಹಕ್ಕು’ ಎಂದ ಆಮ್ ಆದ್ಮಿ ನಾಯಕ
ಈ ಹಿಂದೆ ಸಿಸಿಬಿಯಲ್ಲಿದ್ದ ಮಮತೇಶ್ ಗೌಡ ಸೀಜ್ ಮಾಡಲಾಗಿದ್ದ ರಕ್ತಚಂದನ ಅಕ್ರಮ ಮಾರಾಟ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ. ಇದೀಗ ಪಿಎಸ್ಐ ಹುದ್ದೆ ಅಕ್ರಮದಲ್ಲಿಯೂ ಮಮತೇಶ್ ಗೌಡ ಪಾಲ್ಗೊಂಡಿದ್ದು, ಸಿಐಡಿ ಪೊಲೀಸರು ಬಂಧಿಸಿದ್ದಾರೆ.