ಬೆಂಗಳೂರು : ಒಪ್ಪಿಗೆ ಇಲ್ಲದೇ ಗೃಹ ಸಚಿವ ಜಿ.ಪರಮೇಶ್ವರ್ ಮನೆಗೆ ಪೊಲೀಸರ ಭೇಟಿ ನಿಷೇಧಿಸಲಾಗಿದೆ.
ಪೂರ್ವಾನುಮತಿ ಪಡೆಯದೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಮನೆಗೆ ಭೇಟಿ ನೀಡುವ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಇಲಾಖೆಯ ಘಟಕಗಳ ಮುಖ್ಯಸ್ಥರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಚಿಸಿದ್ದಾರೆ. ಗೃಹ ಸಚಿವರ ಮನೆಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮೆಮೋ ನೀಡಲಾಗಿದೆ.ವರ್ಗಾವಣೆ ಕೆಲಸದ ವಿಚಾರವಾಗಿ ಪೊಲೀಸರು ಗೃಹ ಸಚಿವರ ಮನೆ, ಕಚೇರಿಗೆ ಭೇಟಿ ಮಾಡುತ್ತಿದ್ದಾರೆ. ಈ ನಡುವೆ ಗೃಹ ಸಚಿವರ ಕಚೇರಿಯಿಂದ ಡಿಜಿ, ಐಜಿಪಿ ಕಚೇರಿಗೆ ಮಾಹಿತಿ ನೀಡಲಾಗಿದೆ.
ಹೀಗಾಗಿ ಪೊಲೀಸ್ ಅಧಿಕಾರಿಗಳಿಗೆ ಮೆಮೋ ನೀಡಲಾಗಿದ್ದು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಗೃಹ ಸಚಿವರ ಮನೆಗೆ ಹೋಗುವಂತಿಲ್ಲ. ಒಂದು ವೇಳೆ ಗೃಹ ಸಚಿವರ ಮನೆ, ಅಥವಾ ಕಚೇರಿಗೆ ಹೋಗಬೇಕೆಂದರೆ ಡಿಜಿ ಐಜಿಪಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ. ನೋಂದಣಿ ಮಾಡಿಸಿಕೊಳ್ಳದೆ ಗೃಹ ಸಚಿವರ ಮನೆಗೆ ಹೋಗುವಂತಿಲ್ಲ ಎಂದು ಹೇಳಲಾಗಿದೆ.