alex Certify BIG NEWS : ಮಕ್ಕಳಲ್ಲಿ ನ್ಯುಮೋನಿಯಾ ಆತಂಕ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಮಕ್ಕಳಲ್ಲಿ ನ್ಯುಮೋನಿಯಾ ಆತಂಕ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು :  ಚೀನಾದಲ್ಲಿ ಮಕ್ಕಳ ಉಸಿರಾಟದ ಕಾಯಿಲೆಯ ಉಲ್ಬಣ ಪ್ರಕರಣವನ್ನು ಗಮನಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಇನ್ಫ್ಲುಯೆನ್ಸ (ಶೀತ ಜ್ವರ) ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳ ತಯಾರಿಯನ್ನು ಪೂರ್ವಭಾವಿಯಾಗಿ ಪರಿಶೀಲಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.

ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳ ವರದಿಯಂತೆ ಚೀನಾ ದೇಶದಲ್ಲಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಉಲ್ಬಣ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಮತ್ತು ಸದರಿ ಪ್ರಕರಣಗಳ ಕುರಿತು WHO ಹೇಳಿಕೆಯನ್ನು ಗಮನಿಸಿದರೆ, ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಈ ಹೆಚ್ಚಳಕ್ಕೆ ಇನ್ನುಯನ್ನ ಮೈಕೋಪ್ಲಾಸ್ಮಾ ನ್ಯುಮೋನಿಯಾ, SARS- ನಂತಹ ಸಾಮಾನ್ಯ ಸೂಕ್ಷ್ಮಾಣುಜೀವಿಗಳು ಕಾರಣವೇ ಹೊರತು Cov-2 ನಂತಹ ಇತರ ಯಾವುದೇ ಅಸಾಮಾನ್ಯ ರೋಗಕಾರಕದಿಂದಲ್ಲ ಎಂಬುದು ಖಚಿತವಾಗಿದೆ.

ಆರೋಗ್ಯ ಸೇವೆಗಳ ಮಹಾನಿರ್ದೇಶಕರು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇವರು ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಯ ಸನ್ನದ್ಧತೆಯನ್ನು ಪೂರ್ವಭಾವಿಯಾಗಿ ಪರಿಶೀಲಿಸಲು ಮತ್ತು ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಚಟುವಟಿಕೆಗಳು ಅತ್ಯಂತ ಆದ್ಯತೆಯ ವಿಷಯವಾಗಿ ಜಾರಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ನಿರ್ದೇಶಿಸಿದ್ದಾರೆ. ಆದ್ದರಿಂದ, ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ:

  1. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ಎಲ್ಲಾ ಆರೋಗ್ಯ ಕೇಂದ್ರಗಳು ಮತ್ತು ಎಲ್ಲಾ ಖಾಸಗಿ ಆಸ್ಪತ್ರೆಗಳು ILI ಮತ್ತು SARI ಪಕರಣಗಳನ್ನು IDSP-IHIP ಪೋರ್ಟಲ್‌ನಲ್ಲಿ ವರದಿ ಮಾಡುತ್ತಿರುವ ಬಗ್ಗೆ ಹಾಗೂ ರೋಗನಿರ್ಣಯಕ್ಕಾಗಿ ಸೂಕ್ತವಾದ ಮಾದರಿ ಸಂಗ್ರಹಣೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು.
  2. ಈಗಾಗಲೇ ನೀಡಲಾದ “COVID-19 ಸಂದರ್ಭದಲ್ಲಿ ಪರಿಷ್ಕೃತ ಕಣ್ಯಾವಲು ಕಾರ್ಯಾಚರಣೆಯ ಮಾರ್ಗಸೂಚಿಗಳ” ಅನುಷ್ಠಾನದ ಮೇಲ್ವಿಚಾರಣೆ ಮಾಡುವುದು.
  3. D50 ಗಳ ಅಡಿಯಲ್ಲಿರುವ ಜಿಲ್ಲಾ ಕಣಾವಲು ಘಟಕಗಳು ILI ಮತ್ತು SARI ಪಕರಣಗಳ ಪುವೃತ್ತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಯಾವುದೇ ಅಸಾಮಾನ್ಯ ಹೆಚ್ಚಳವನ್ನು ತಕ್ಷಣವೇ ವರದಿ ಮಾಡುವುದು.
  4. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಎಲ್ಲಾ ಡೋಸ್‌ಗಳ ಒಸಾಮಿವಿ‌ ಟ್ಯಾಬ್ಲೆಟ್ ಗಳು, ಇತರ ಅಗತ್ಯ ಔಷಧಗಳು ಮತ್ತು ಆರೋಗ್ಯ ಕಾರ್ಯಕರ್ತರ ಬಳಕೆಗಾಗಿ PPE ಗಳು ಸಾಕಷ್ಟು ಪಮಾಣದಲ್ಲಿ ದಾಸ್ತಾನು ಇರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
  5. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಮುಖಗವಸು ಧರಿಸುವುದನ್ನು ಖಚಿತಪಡಿಸಿಕೊಳ್ಳುವುದು.
  6. ಕೋವಿಡ್-19 ಪ್ರಕರಣಗಳನ್ನು ನಿರ್ವಹಿಸಲು ಗೊತ್ತುಪಡಿಸಿದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ವಿಶೇಷವಾಗಿ ಮಕ್ಕಳಲ್ಲಿ ಮತ್ತು ಹಿರಿಯ ನಾಗರಿಕರಲ್ಲಿ ನ್ಯುಮೋನಿಯಾದ ಕಾರಣದಿಂದ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ನಿಭಾಯಿಸಲು ಹಾಗೂ ಆಸ್ಪತ್ರೆಯ ಸನ್ನದ್ಧತೆಯನ್ನು ನಿರ್ಣಯಿಸಲು ತಕ್ಷಣವೇ ಸ್ವಯಂ-ಪರಿಶೋಧನೆ ಮಾಡಿ ವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ/ಅರೆವೈದ್ಯಕೀಯ ಮಾನವಶಕ್ತಿ, ಆಮ್ಲಜನಕ ಹಾಸಿಗೆಗಳು, ಪ್ರತ್ಯೇಕ ಹಾಸಿಗೆಗಳು, ವಂಟಿಲೇಟರ್‌ಗಳು, ಪಿಎಸ್ಎ ಸ್ಥಾವರಗಳು, LMO ಸ್ಥಾವರಗಳು, ಆಮ್ಲಜನಕದ ಸಾಂದ್ರಕಗಳು, ಆಮ್ಲಜನಕ ಸಿಲಿಂಡರ್‌ಗಳು ಹಾಗೂ ಔಷಧಗಳು, PPE ಕಿಟ್‌ಗಳು, N-95 ವೈದ್ಯಕೀಯ ಮಾಸ್ಕ್‌ಗಳು, ಪರೀಕ್ಷಾ ಕಿಟ್‌ಗಳು ಮತ್ತು ಲ್ಯಾಬ್ ಸೌಲಭ್ಯಗಳು, ಆಂಬ್ಯುಲೆನ್ಸ್ಗಳು ಇತ್ಯಾದಿಗಳ ಮೌಲ್ಯಮಾಪನ ಮಾಡುವುದು.
  7. ಪುಕರಣಗಳ ಅಸಾಮಾನ್ಯ ಪ್ರಸ್ತುತಿ, ಕ್ಲಸ್ಟರ್‌ಗಳು/ಸ್ಫೋಟ (outbreak), ಮರಣಗಳ ಶೀಘ್ರ ಪತ್ತೆಗಾಗಿ ಸಮುದಾಯ ಕಣಾವಲು, ಮಾಧ್ಯಮ ಸ್ಕ್ಯಾನಿಂಗ್ ಮೂಲಕ ಈವೆಂಟ್ ಆಧಾರಿತ ಕಣ್ಯಾವಲು ಮತ್ತು IHIP ವರದಿಯ ಮೂಲಕ ಸೂಚಕ ಆಧಾರಿತ ಕಣಾವಲು ಚಟುವಟಿಕೆಗಳನ್ನು ಬಲಪಡಿಸುವುದು.
  8. ಕೋವಿಡ್ ಋಣಾತ್ಮಕ ಪರೀಕ್ಷಾ ವರದಿ ಇರುವ ಎಲ್ಲಾ SARI ಸಾವಿನ ಪ್ರಕರಣಗಳಿಂದ ಮಾದರಿಗಳನ್ನು ಸಂಗ್ರಹಿಸಿ ಹತ್ತಿರದ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ(VRDL)ನಲ್ಲಿ ಇನ್ನು ಯನ್ನ, SARS-Cov2 ಮತ್ತು ಅಡನೊವೈರಸ್ ಪರೀಕ್ಷೆಗಳಿಗೊಳಪಡಿಸುವುದು.
  9. ಎಲ್ಲಾ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳು. IHIP ಪೋರ್ಟಲ್‌ನಲ್ಲಿ ಪರೀಕ್ಷಾ ಡೇಟಾವನ್ನು ಕಡ್ಡಾಯವಾಗಿ ವರದಿ ಮಾಡುವಂತೆ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...