ಬೆಂಗಳೂರು : ಪ್ರಧಾನಿ ಮೋದಿ ತಮ್ಮ ಅವಧಿಯಲ್ಲಿ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದಲ್ಲಿ 2013-14 ರಲ್ಲಿ ರೂ.53,10,000 ಕೋಟಿ ಸಾಲ ಇತ್ತು. ಈಗ ರೂ.183,67,132 ಕೋಟಿ ಸಾಲ ಇದೆ. Narendra Modi ಅವರ ಅವಧಿಯಲ್ಲಿ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ದೇಶವನ್ನು ಸಾಲಗಾರರನ್ನಾಗಿ ಮಾಡಿದವರು ಯಾರು? ನರೇಂದ್ರ ಮೋದಿಜಿ, ಬಿಜೆಪಿಯವರು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
2018 ರಲ್ಲಿ ನನ್ನ ಅವಧಿಯ ಮುಕ್ತಾಯದ ವೇಳೆ 2.42 ಲಕ್ಷ ಕೋಟಿ ಸಾಲ ಇದ್ದು, 2023 ಮಾರ್ಚ್ ವೇಳೆಗೆ 5.23 ಲಕ್ಷ ಕೋಟಿ ಆಗಿತ್ತು. ಬಿಜೆಪಿ ಸರ್ಕಾರದ ನಾಲ್ಕು ವರ್ಷದಲ್ಲಿ 2,81,00 ಕೋಟಿ ರೂ. ಸಾಲ ಮಾಡಿದ್ದಾರೆ. ಇದಲ್ಲದೇ ಜಿ.ಎಸ್.ಟಿ. ಪರಿಹಾರ ಸಾಲ 3,000 ಕೋಟಿ ರೂ. ಮಾಡಿದ್ದಾರೆ ಎಂದರು.