ನವದೆಹಲಿ: ದೇಶಾದ್ಯಂತ ಪಿ ಎಫ್ ಐ ಸಂಘಟನೆ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಪಿ ಎಫ್ ಐ ಸಂಘಟನೆ ಅಧಿಕೃತ ವೆಬ್ ಸೈಟ್ ನ್ನು ಬ್ಲಾಕ್ ಮಾಡಿದೆ.
ಅಲ್ಲದೇ ಪಿ ಎಫ್ ಐ ಸಂಘಟನೆಯ ಎಲ್ಲಾ ಸಾಮಾಜಿಕ ಜಾಲತಾಣಗಳಿಗೂ ನಿಷೇಧ ಕುರಿತು ಮಾಹಿತಿ ರವಾನಿಸಿದೆ. ಟ್ವಿಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದ ಕಂಪನಿಗಳಿಗೂ ನಿಷೇಧ ಕುರಿತು ಸರ್ಕಾರ ಮಾಹಿತಿ ರವಾನಿಸಿದೆ.
ಪಿ ಎಫ್ ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳನ್ನು ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದೆ.