ಬೆಂಗಳೂರು: ದೇಶದಲ್ಲಿ ಪಿ ಎಫ್ ಐ ಸಂಘಟನೆ ನಿಷೇಧ ಮಾಡಿರುವುದು ಸ್ವಾಗತಾರ್ಹ. ದೇಶದ ಸಮಗ್ರತೆ, ಏಕತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ದುಷ್ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಪಿ ಎಫ್ ಐ ಹಾಗೂ ಅದರ ಅಂಗಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಎನ್ ಐ ಎ ಹಾಗೂ ಕರ್ನಾಟಕ ಪೊಲೀಸರು ಈ ಮೊದಲೇ ಪಿ ಎಫ್ ಐ ಸಂಘಟನೆ ಮುಖಂಡರ ಮನೆ ಮೇಲೆ ದಾಳಿ ನಡೆಸಿ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದರು. ಮತಾಂಧ ಶಕ್ತಿಗಳು ದೇಶದ ವಿರುದ್ಧ ಯುವಕರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದವು ಈಗ ಈ ಸಂಘಟನೆ ಬ್ಯಾನ್ ಮೂಲಕ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಿದೆ ಎಂದರು.
5 ವರ್ಷಗಳ ಕಾಲ ಯುಎಪಿಎ ಕಾಯ್ದೆಯಡಿ ಪಿ ಎಫ್ ಐ ಹಾಗೂ ಅದರ ಇತರ ಸಹವರ್ತಿ ಸಂಘಟನೆ ನಿಷೇಧ ಮಾಡಿರುವುದು ಸಂತಸದ ವಿಚಾರ ಎಂದು ಹೇಳಿದರು.