ಬೆಂಗಳೂರು : ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರ ಹಲ್ಲೆ ಪ್ರಕರಣ ಖಂಡಿಸಿ ಕನ್ನಡಪರ ಸಂಘಟನೆಗಳು ಸಿಡಿದೆದ್ದಿದ್ದು, ಮಾ.22 ರಂದು ಅಖಂಡ ಕರ್ನಾಟಕ ಬಂದ್ ಹೋರಾಟಕ್ಕೆ ಕರೆ ನೀಡಿದೆ.
ಮಹಾರಾಷ್ಟ್ರದಲ್ಲಿ ಕನ್ನಡಿಗರು, ಕರ್ನಾಟಕದ ಬಸ್ ಮೇಲೆ ನಡೆದ ಪುಂಡಾಟಿಕೆ ಹಾಗೂ ಕಂಡಕ್ಟರ್ , ಚಾಲಕರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದೆ.
ಬೆಂಗಳೂರಿನಲ್ಲಿ ನಿನ್ನೆ ಸಭೆ ನಡೆಸಿದ ಬಳಿಕ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಈ ವಿಷಯ ತಿಳಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಾಲು ಸಾಲು ಹೋರಟಕ್ಕೆ ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ. ಮಾರ್ಚ್ 3ರಿಂದ ಮಾರ್ಚ್ 22ರ ವರೆಗೆ ಪ್ರತಿಭಟನೆಗೆ ರೂಪುರೇಷೆ ಸಿದ್ಧಪಡಿಸಿವೆ.ಮಾರ್ಚ್ 3ರಂದು ರಾಜಭವನ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಕಂಡಕ್ಟರ್ ಮೇಲೆ ಹಲ್ಲೆ ಖಂದಿಸಿ ಮಾರ್ಚ್ 7ರಂದು ಬೆಳಗಾವಿ ಚಲೋಗೆ ತೀರ್ಮಾನಿಸಲಾಗಿದೆ. ಮಾರ್ಚ್ 11ರಂದು ಅತ್ತಿಬೆಲೆ ಗಡಿ ಬಂದ್ ಹೋರಾಟಕ್ಕೆ ಕರೆ ನೀಡಲಾಗಿದೆ. ಮಾರ್ಚ್ 16ರಂದು ಹೊಸಕೋಟೆ ಟೋಲ್ ಬಂದ್ ಗೆ ನಿರ್ಧರಿಸಲಾಗಿದೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಈ ಬಂದ್ ಕರೆ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಅಂದು ರಾಜ್ಯಾಧ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಆಟೋ ಸಂಘಟನೆಗಳು, ಕ್ಯಾಬ್, ಹೋಟೆಲ್ ಮಾಲೀಕರು ಎಲ್ಲರೂ ಬ್ಂದ್ ಗೆ ಬೆಂಬಲ ನೀಡಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.