ಬೆಂಗಳೂರು : ಎಫ್ ಡಿ ಎ ಪರೀಕ್ಷೆ ವೇಳೆ ಒ ಎಮ್ ಆರ್ ಶೀಟ್ ದುರ್ಬಳಕೆ ಆಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಕೆಇಎ ನಡೆಸಿದ ವಿವಿಧ ನಿಗಮ ಮಂಡಳಿಗಳ ಎಫ್ ಡಿ ಎ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ದುರ್ಬಳಕೆಯೂ ಆಗಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.
ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದವರನ್ನು ಮೊದಲೇ ಪತ್ತೆಹಚ್ಚಿ ಪೊಲೀಸ್ ವಶಕ್ಕೆ ನೀಡಲಾಗಿದೆ. ಒಎಮ್ ಆಎರ್ ಶೀಟ್ ನಲ್ಲಿ ಯಾವ ದುರ್ಬಳಕೆಯೂ ಆಗಿಲ್ಲ. ನಕಲು ಸೇರಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ಇರಲಿಲ್ಲ. ಕಟ್ಟೆಚ್ಚರ ವಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ನಡೆಸಿದ್ದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬಯಲಾಗಿತ್ತು. ಪರೀಕ್ಷೆಯ ಓಎಂಆರ್ ಶೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಲಬುರ್ಗಿ, ಯಾದಗಿರಿಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಬ್ಬರು ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದರು. ನಂತರ ಓಎಂಆರ್ ಶೀಟ್ ವೈರಲ್ ಆಗಿತ್ತು.