![](https://kannadadunia.com/wp-content/uploads/2021/05/Vidhana_Soudha_750_1.gif)
ಬೆಂಗಳೂರು : ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿ:01-04-2006ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ನಿರ್ದಿಷ್ಟ ಪಿಂಚಣಿ ಬಿಡುಗಡೆ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ(1)ರ ಪತ್ರದಲ್ಲಿ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿ:01-04-2006ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ಅನುಬಂಧದಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶನವಾಗಿರುತ್ತದೆ.
ಅದರಂತೆ ಸದರಿ ಮಾಹಿತಿಯು ಅನುಬಂಧ-01 ರಲ್ಲಿ ಸಲ್ಲಿಸಲು ವಿಭಾಗದ ಎಲ್ಲಾ ಉಪನಿರ್ದೇಶಕರು(ಆಡಳಿತ) ರವರಿಗೆ ಉಲ್ಲೇಖ(2)ರನ್ವಯ ತಿಳಿಸಲಾಗಿತ್ತು.
ಉಲ್ಲೇಖಿತ(3)ರ ಪತ್ರದಲ್ಲಿ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರ ಆಪ್ತ ಕಾರ್ಯದರ್ಶಿ ರವರ ದಿನಾಂಕ:18-12-2023ರ ಟಿಪ್ಪಣಿ ಮತ್ತು ಅದರ ಅಡಕಗಳನ್ನು ಇದರೊಡನೆ ಲಗತ್ತಿಸಿ. ಉಲ್ಲೇಖಿತ(4) ರನ್ವಯ ದಿನಾಂಕ:01-04-2006ರ ಪೂರ್ವದಲ್ಲಿ ನೇಮಕವಾಗಿದ್ದು ದಿನಾಂಕ:01-04-2006ರ ನಂತರ ವೇತನಾನುದಾನಕ್ಕೆ ಒಳಪಟ್ಟು ನಿವೃತ್ತರಾಗಿರುವ/ಮರಣಹೊಂದಿರುವ /ಹಾಲಿ ಸೇವೆಯಲ್ಲಿದ್ದು ಮುಂದೆ ನಿವೃತ್ತರಾಗಿರುವ ಅನುದಾನಿತ ಪಿಂಚಣಿ ವಂಚಿತ ಶಿಕ್ಷಕ ನಿಶ್ಚಿತ ಪಿಂಚಣಿ ಅಥವಾ ನಿರ್ದಿಷ್ಟ ಪಿಂಚಣಿ ಬಿಡುಗಡೆ ಮಾಡುವಂತೆ ಕೋರಿರುವ ಬಗ್ಗೆ ನಿಯನಾನುಸಾರ ಪರಿಶೀಲಿಸಲು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಾಪ್ಟ್ ಪ್ರತಿಯನ್ನು ಇ-ಮೇಲ್ ವಿಳಾಸಕ್ಕೆ ಮತ್ತು ಹಾರ್ಡ ಪ್ರತಿಯನ್ನು ಕೊಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಮಾನ್ಯ ಸರ್ಕಾರದಿಂದ ನಿರ್ದೇಶನವಾಗಿರುತ್ತದೆ.
ಅದರಂತೆ ಉಲ್ಲೇಖಿತ(5)ರಪತ್ರದಲ್ಲಿ ಮಾನ್ಯ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ರವರ ಅನುಬಂಧ-01.ಅನುಬಂಧ-02 ಮತ್ತು ಅನುಬಂಧ-03 ರಲ್ಲಿ ತಮ್ಮ ಆಯುಕ್ತಾಲಯದ ವ್ಯಾಪ್ತಿಯಲ್ಲಿನ ಜಿಲ್ಲಾವಾರು ಕ್ರೋಢೀಕೃತ ಮಾಹಿತಿಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸಲು ಕೋರಿದ್ದಾರೆ.
![](https://kannadadunia.com/wp-content/uploads/2024/02/WhatsApp-Image-2024-02-14-at-12.35.48-PM.jpeg)
![](https://kannadadunia.com/wp-content/uploads/2024/02/WhatsApp-Image-2024-02-14-at-12.35.49-PM.jpeg)