alex Certify BIG NEWS: NPA ಲಿಸ್ಟ್ ನಲ್ಲಿರುವ ಬ್ಯಾಂಕ್ ಖಾತೆಗಳ ಟಾರ್ಗೆಟ್ ಮಾಡಿ ವಂಚನೆ; ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: NPA ಲಿಸ್ಟ್ ನಲ್ಲಿರುವ ಬ್ಯಾಂಕ್ ಖಾತೆಗಳ ಟಾರ್ಗೆಟ್ ಮಾಡಿ ವಂಚನೆ; ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್

ಬೆಂಗಳೂರು: ಎನ್ ಪಿ ಎ ಲಿಸ್ಟ್ ನಲ್ಲಿರುವ ಬ್ಯಾಂಕ್ ಖಾತೆಗಳನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ರಾಘವ್ ಲಾಲ್ ಹಾಗೂ ಪಿಳ್ಳೆ ಬಂಧಿತ ಆರೋಪಿಗಳು. ತಮ್ಮದೇ ಬ್ಯಾಂಕ್ ನ ಕೆಲ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿದ್ದ ಆರೋಪಿಗಳು ಎನ್ ಪಿ ಲಿಸ್ಟ್ ನಲ್ಲಿರುವ ಅಕೌಂಟ್ ಗಳನ್ನು ಪತ್ತೆ ಮಾಡಿ, 5 ಕೋಟಿ ರೂಪಾಯಿಗೂ ಹೆಚ್ಚು ಲೋನ್ ಪಡೆದ ಖಾತೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಖಾತೆ ಹೋಲ್ಡರ್ ಗೆ ಕರೆ ಮಾಡಿ ಕಡಿಮೆ ಹಣಕ್ಕೆ ಲೋನ್ ಕ್ಲೀಯರ್ ಮಾಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದರು.

ಸತೀಶನ್ ಎಂಬುವವರಿಗೆ ಆರೋಪಿಗಳು 82 ಲಕ್ಷ ವಂಚಿಸಿದ್ದರು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...