ರಾಮನಗರ : ಕ್ರಿಸ್ ಮಸ್ ಹಬ್ಬದ ದಿನವೇ ಕಿಡಿಗೇಡಿಗಳು ದೇವಸ್ಥಾನಕ್ಕೆ ನುಗ್ಗಿ ಉದ್ಭವ ಲಿಂಗ ಕೆಡವಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ.
ಕ್ರಿಸ್ಮಸ್ ಹಬ್ಬದ ದಿನವೇ ಬೈಕಿನಲ್ಲಿ ಬಂದ ಕಿಡಿಗೇಡಿಗಳು ಸಿದ್ಧೇಶ್ವರ ಬೆಟ್ಟದಲ್ಲಿನ ಉದ್ಭವ ಲಿಂಗವನ್ನು ಭಗ್ನಗೊಳಿಸಿದ್ದಾರೆ. ಕಿಡಿಗೇಡಿಗಳು ದೇವಸ್ಥಾನ ನುಗ್ಗಿ ಉದ್ಭವ ಲಿಂಗ ಕೆಡವಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲಿಸರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.