alex Certify BIG NEWS : ಶೀಘ್ರವೇ ಸಚಿವ ಶಿವಾನಂದ್ ಪಾಟೀಲರ ಹಗರಣ ಬಯಲಿಗೆ ; ಬಿಜೆಪಿ ಶಾಸಕ ‘ಯತ್ನಾಳ್’ ಸ್ಪೋಟಕ ಹೇಳಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಶೀಘ್ರವೇ ಸಚಿವ ಶಿವಾನಂದ್ ಪಾಟೀಲರ ಹಗರಣ ಬಯಲಿಗೆ ; ಬಿಜೆಪಿ ಶಾಸಕ ‘ಯತ್ನಾಳ್’ ಸ್ಪೋಟಕ ಹೇಳಿಕೆ..!

ಬೆಂಗಳೂರು : ಶೀಘ್ರವೇ ಸಚಿವ ಶಿವಾನಂದ್ ಪಾಟೀಲರ ಹಗರಣ ಬಯಲಿಗೆ ಬರಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈಗಾಗಲೇ ವಾಲ್ಮೀಕಿ ನಿಗಮದ ಹಗರಣ ಭಾರಿ ಸುದ್ದಿಯಾಗುತ್ತಿದೆ, ಇದರ ನಡುವೆ ಮತ್ತೊಂದು ಹಗರಣ ಬೆಳಕಿಗೆ ಬರಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಎಲ್ಲಾ ಮಂತ್ರಿಗಳು ಲೂಟಿ ಹೊಡೆಯುತ್ತಿದ್ದಾರೆ ಎಂದು ಹೇಳಿದರು. ಶೀಘ್ರವೇ ಸಚಿವ ಶಿವಾನಂದ್ ಪಾಟೀಲರ ಹಗರಣ ಬಯಲಿಗೆ ಬರಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮೇಲ್ದಂಡೆ ಯೋಜನೆಯ ಗುತ್ತಿಗೆದಾರರಿಗೆ ಅನ್ಯಾಯ

ಕೃಷ್ಣ ಮೇಲ್ದಂಡೆ ಯೋಜನೆಯ ಗುತ್ತಿಗೆದಾರರಿಗೆ ಸರ್ಕಾರ ಅನ್ಯಾಯವೆಸಗುತ್ತಿದೆ. 2023 ರಿಂದ 2024 ವರೆಗೂ ಗುತ್ತಿಗೆದಾರರ ಇ.ಎಂ.ಡಿ ಹಣ ಮರಳಿ ನೀಡದೆ ದಿನಕ್ಕೊಂದು ಸಬೂಬು ಹೇಳುತ್ತಿದ್ದಾರೆ. ಇದಲ್ಲದೆ, ಯಾವುದೇ ಟೆಂಡರ್ ತೆರೆದಿಲ್ಲ. ಅಗ್ರಿಮೆಂಟ್ ಕೂಡ ಮಾಡಿಕೊಂಡಿಲ್ಲ. ಬಾಕಿ ಬಿಲ್ ಗಳ ಹಣವನ್ನು ನೀಡಲು ಈ ವರ್ಷ 25 % ಹಾಗೂ ಮುಂದಿನ ವರ್ಷ 25 % ಎಂದು ಹೇಳುತ್ತಿದ್ದಾರೆ. ಗುತ್ತಿಗೆದಾರರು ಸಾಲ ಮಾಡಿಕೊಂಡು ಈಗ ಸಕಾಲಕ್ಕೆ ಹಣ ಪಾವತಿ ಆಗದ ಕಾರಣ, ಬ್ಯಾಂಕ್ ನವರು ಅವರ ಜೆ.ಸಿ.ಬಿ., ಟ್ರಾಕ್ಟರ್ ಸೇರಿದಂತೆ ಇತರ ಉಪಕರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಯಾವುದೇ ಬೃಹತ್ ಯೋಜನೆಯಲ್ಲಿ ಗುತ್ತಿಗೆದಾರರ ಪಾತ್ರ ಬಹು ಮುಖ್ಯವಾಗಿರುತ್ತದೆ; ಯೋಜನೆಯ ಗುಣಮಟ್ಟ, ನಿಗದಿ ಮಾಡಿದ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುವುದು ರಾಜ್ಯ ಹಾಗೂ ಜನರ ಹಿತಕ್ಕೆ ಬಹಳಷ್ಟು ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ, ಯೋಜನೆಯ ವೆಚ್ಚ ಹೆಚ್ಚಾಗಿ (escalate ) ಆಗಿ ಆ ಹಣವನ್ನು ತೆರಿಗೆದಾರನ ಹಣದಿಂದಲೇ ಪಾವತಿ ಮಾಡಬೇಕಾಗುತ್ತದೆ.

ಕೃಷ್ಣ ಮೇಲ್ದಂಡೆ ಯೋಜನೆ ಸಕಾಲಕ್ಕೆ ಪೂರ್ಣವಾಗದ ಕಾರಣ ಉತ್ತರ ಕರ್ನಾಟಕದ ಅನ್ನದಾತರು ಸಹ ಹೈರಾಣಾಗಿದ್ದಾರೆ. ಇತ್ತ ಗುತ್ತಿಗೆದಾರರ ಪಾಡು ಹೇಳತೀರದಾಗಿದೆ. ಸರ್ಕಾರದ ಗುತ್ತಿಗೆಯನ್ನೇ ನಂಬಿಕೊಂಡು ಜೀವನ ನಿರ್ವಹಣೆ ಮಾಡುವ ಇವರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಬೇಕು. ಆದರೆ, ರಾಜ್ಯದ ಉಪ ಮುಖ್ಯಮಂತ್ರಿಗಳ ಕೈಯಲ್ಲಿ ಎಲ್ಲ ಇದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಕೂಡಲೇ ಈ ಗುತ್ತಿಗೆದಾರರ ನೆರವಿಗೆ ಧಾವಿಸಬೇಕು. ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬವಾಗದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಗುತ್ತಿಗೆದಾರರಿಗೆ ನ್ಯಾಯಯುತವಾಗಿ ಹಾಗೂ ನಿಯಮವಾಳಿಗಳ ಅನುಸಾರ ಬರಬೇಕಾದ ಬಿಲ್ ಪಾವತಿಯನ್ನು ಹಾಗೂ Earnest Money Deposit (EMD) ಅನ್ನು ಕೂಡಲೇ ಹಿಂದುರಿಗಿಸಬೇಕು ಎಂದು ಯತ್ನಾಳ್ ಮನವಿ ಮಾಡಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...