alex Certify BIG NEWS: Mi-17V5 ಹೆಲಿಕಾಪ್ಟರ್ ಪತನ; ತನಿಖೆಗೆ ಆದೇಶಿಸಿದ IAF | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: Mi-17V5 ಹೆಲಿಕಾಪ್ಟರ್ ಪತನ; ತನಿಖೆಗೆ ಆದೇಶಿಸಿದ IAF

ನವದೆಹಲಿ: ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನ ಪ್ರಕರಣವನ್ನು ಇಂಡಿಯನ್ ಏರ್ ಫೋರ್ಸ್ ತನಿಖೆಗೆ ಆದೇಶಿಸಿದೆ.

ಬಿಪಿನ್ ರಾವತ್ ಸೇರಿದಂತೆ 9 ಜನರು ಪ್ರಯಾಣಿಸುತ್ತಿದ್ದ Mi-17V5 ಹೆಲಿಕಾಪ್ಟರ್ ತಮಿಳುನಾಡಿನ ಕೂನ್ನೂರು ಬಳಿ ಪತನಗೊಂಡಿದ್ದು, ದುರ್ಘಟನೆಯಲ್ಲಿ ಬಿಪಿನ್ ರಾವತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ವೆಲ್ಲಿಂಗ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಹೆಲಿಕಾಪ್ಟರ್ ದುರಂತದಲ್ಲಿ 7 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಾರಣ ಘಟನಾ ಸ್ಥಳದಲ್ಲಿ 7 ಮೃತದೇಹಗಳು ಪತ್ತೆಯಾಗಿವೆ. ನಾಪತ್ತೆಯಾದವರಿಗಾಗಿ ಕೋಬ್ರಾಪಡೆ, ಪೊಲೀಸರು ಶೋಧ ನದೆಸಿದ್ದಾರೆ.

ʼಆದಿಪುರುಷʼನಾಗಲು ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ…?

ಹೆಲಿಕಾಪ್ಟರ್ ಪತನಗೊಳ್ಳುತ್ತಿದಂತೆಯೇ ಬೆಂಕಿ ಹೊತ್ತಿಕೊಂಡಿದ್ದು, ಒಂದುವರೆ ಗಂಟೆ ಬಳಿಕ ಬೆಂಕಿ ಕೆನ್ನಾಲಿಗೆ ತಹಬದಿಗೆ ಬಂದಿದೆ.

ಸೇನಾ ಮುಖ್ಯಸ್ಥ ರಾವತ್ ಪ್ರಯಾಣಿಸುತ್ತಿದ್ದ Mi-17V5 ಹೆಲಿಕಾಪ್ಟರ್ ಪತನ ದುರಂತವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...