ಬೆಂಗಳೂರು: ಎಂ.ಜಿ. ಮುತ್ತು ಮಾಲಿಕತ್ವದ ಎಂಜಿಎಂ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರು ಸೇರಿದಂತೆ 50 ಕಡೆಗಳಲ್ಲಿ ಏಕಕಾಲದಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಬೆಂಗಳೂರು, ತಮಿಳುನಾಡು, ಕೊಚ್ಚಿ, ಆಂಧ್ರಪ್ರದೇಶ ಸೇರಿದಂತೆ 50 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ಐಟಿ ಟೀಂ ನಿಂದ ಈ ದಾಳಿ ನಡೆದಿದೆ.
ಬೆಂಗಳೂರಿನ ಜಯನಗರದ ಎಂಜಿಎಂ ಬ್ರ್ಯಾಂಚ್ ಆಫೀಸ್ ಮೇಲೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳು ದಾಖಲೆಗಳ ಶೋಧ ನಡೆಸಿದ್ದಾರೆ. ಎಂಜಿಎಂ ಸಮೂಹ ಚೆನ್ನೈ, ಬೆಂಗಳೂರಿನಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್, ಥೀಮ್ ಪಾರ್ಕ್ ಗಳನ್ನು ನಿರ್ವಹಿಸುತ್ತದೆ.