ಬೆಂಗಳೂರು : ರಾಜ್ಯದ ಎಲ್ಲಾ ಗರ್ಭಿಣಿಯರಿಗೂ ಸಾಮೂಹಿಕ ಸೀಮಂತ ಮಾಡಲು ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ಸರ್ಕಾರ ಆದೇಶ ಹೊರಡಿಸಲಿದೆ.
ಈ ಬಗ್ಗೆ ಸರ್ಕಾರ ಮಹತ್ವದ ಪ್ರಕಟಣೆ ಹೊರಡಿಸಿದ್ದು, ರಾಜ್ಯದ ಎಲ್ಲ ಗರ್ಭಿಣಿಯರಿಗೂ 2026ರ ಮಾರ್ಚ್ನಿಂದ ಜಿಲ್ಲಾವಾರು ಸಾಮೂಹಿಕ ಸೀಮಂತ ಮಾಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಲಿದೆ. ಗರ್ಭಿಣಿ ಆರೋಗ್ಯವಂತರಾಗಿದ್ದರೆ ಆರೋಗ್ಯವಂತ ಮಕ್ಕಳು ಜನಿಸುತ್ತವೆ. ಆಗ ಆರೋಗ್ಯವಂತ ದೇಶ ನಿರ್ಮಾಣವಾಗುತ್ತದೆ. ಸಾಮೂಹಿಕ ಸೀಮಂತದಂತಹ ಕಾರ್ಯಕ್ರಮಗಳ ಮೂಲಕ ಗರ್ಭಿಣಿಯರು ಹಾಗೂ ಅವರ ಕಂದಮ್ಮಗಳ ಆರೋಗ್ಯದ ಬಗ್ಗೆಯೂ ಸರ್ಕಾರ ಕಾಳಜಿ ತೋರಲು ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ರಾಜ್ಯದ ಎಲ್ಲ ಗರ್ಭಿಣಿಯರಿಗೂ 2026ರ ಮಾರ್ಚ್ನಿಂದ ಜಿಲ್ಲಾವಾರು ಸಾಮೂಹಿಕ ಸೀಮಂತ ಮಾಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಲಿದೆ. ಗರ್ಭಿಣಿ ಆರೋಗ್ಯವಂತರಾಗಿದ್ದರೆ ಆರೋಗ್ಯವಂತ ಮಕ್ಕಳು ಜನಿಸುತ್ತವೆ. ಆಗ ಆರೋಗ್ಯವಂತ ದೇಶ ನಿರ್ಮಾಣವಾಗುತ್ತದೆ. ಸಾಮೂಹಿಕ ಸೀಮಂತದಂತಹ ಕಾರ್ಯಕ್ರಮಗಳ ಮೂಲಕ ಗರ್ಭಿಣಿಯರು ಹಾಗೂ ಅವರ ಕಂದಮ್ಮಗಳ ಆರೋಗ್ಯದ ಬಗ್ಗೆಯೂ… pic.twitter.com/dQTTv1NsCQ
— DIPR Karnataka (@KarnatakaVarthe) March 25, 2025