ಬೆಂಗಳೂರು : ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಿದ್ದು, ’37 IPS ಅಧಿಕಾರಿ’ಗಳ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಕೆಲವು ಐಪಿಎಸ್ ಅಧಿಕಾರಿಗಳಿಗೆ ಬಡ್ತಿಯನ್ನು ನೀಡಿ ವರ್ಗಾವಣೆಗೊಳಿಸಿದೆ ಹಾಗೂ ಕೆಲವು ಐಪಿಎಸ್ ಅಧಿಕಾರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಕಮಲ್ ಪಂತ್, ಐಪಿಎಸ್ (ಕೆಎನ್:1990), ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ, ಬೆಂಗಳೂರು ನಗರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು, ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಮಹಾನಿರ್ದೇಶಕರು, ಕರ್ನಾಟಕ ರಾಜ್ಯದ ನಾಗರಿಕ ರಕ್ಷಣಾ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಹಾಗೂ ಅಲೋಕ್ ಕುಮಾರ್, ಐಪಿಎಸ್ (ಕೆಎನ್:1994),, ಸೀಮಂತ್ ಕುಮಾರ್ ಸಿಂಗ್, ಸೀಮಂತ್ ಕುಮಾರ್ ಸಿಂಗ್, ಐಪಿಎಸ್ (ಕೆಎನ್:1996) ಹರಿಶೇಖರನ್ . ಪಿ, ಐಪಿಎಸ್ (ಕೆಎನ್: 1996), ಹರಿಶೇಖರನ್ . ಪಿ, ಐಪಿಎಸ್ (ಕೆಎನ್: 1996), ಎಂ.ನಂಜುಂಡಸ್ವಾಮಿ, ಐಪಿಎಸ್ (ಕೆಎನ್:1997), ಸೇರಿದಂತೆ ’37 IPS ಅಧಿಕಾರಿ’ಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.