ಹುಬ್ಬಳ್ಳಿ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಇತ್ತ ಬಿಜೆಪಿ ನಾಯಕರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ, ನಿಜವಾಗಿ ಗ್ಯಾಸ್ ಸಿಲಿಂಡರ್ ಬಳಸುವವರು ಯಾರೂ ಬೀದಿಗೆ ಬಂದಿಲ್ಲ. ಇದೊಂದು ಡ್ರಾಮಾ ಎಂದು ಸಚಿವ ನಾರಾಯಣಗೌಡ ಹೇಳಿಕೆ ಬೆನ್ನಲ್ಲೇ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಬೆಲೆ ಏರಿಕೆಗೆ ತಾಲಿಬಾನ್ ಕಾರಣ ಎಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನದ ಬಳಿಕ ಮಾತನಾಡಿದ ಬೆಲ್ಲದ್, ಎಲ್.ಪಿ.ಜಿ. ಸಿಲಿಂಡರ್, ತೈಲ ಬೆಲೆ ಹೆಚ್ಚಳಕ್ಕೆ ತಾಲಿಬಾನ್ ಸಮಸ್ಯೆ ಕಾರಣ. ತಾಲಿಬಾನ್ ಉಗ್ರರಿಂದ ಇಡೀ ಪ್ರಪಂಚಕ್ಕೆ ತೊಂದರೆಯಾಗುತ್ತಿದೆ. ಇದರ ಪರಿಣಾಮ ಭಾರತದಲ್ಲೂ ಗ್ಯಾಸ್ ಸಿಲಿಂಡರ್ ದರ, ತೈಲ ದರ ಏರಿಕೆಯಾಗುತ್ತಿದೆ ಎಂದರು.
GOOD NEWS: ಶೀಘ್ರದಲ್ಲೇ ಮತ್ತೊಂದು ಇವಿ ಸ್ಕೂಟರ್ ಮಾರುಕಟ್ಟೆಗೆ
ತಾಲಿಬಾನ್ ಸಮಸ್ಯೆಯಿಂದಾಗಿ ಕಚ್ಚಾ ತೈಲ ಬರುತ್ತಿಲ್ಲ. ಹಾಗಾಗಿ ಇಂಧನ ದರ ದೇಶದಲ್ಲಿ ಹೆಚ್ಚುತ್ತಿದೆ. ಬೆಲೆ ಏರಿಕೆಗೆ ಏನು ಕಾರಣ? ಯಾಕೆ ಆಗುತ್ತಿದೆ ಎಂಬುದನ್ನು ಮತದಾರರು ಅರ್ಥಮಾಡಿಕೊಳ್ಳುತ್ತಾರೆ. ಜನರು ಪ್ರಬುದ್ಧರಾಗಿದ್ದಾರೆ. ದೇಶದ ಒಳಿತಾಗಿ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.