ಇಂದು ವಿಶ್ವಕರ್ಮ ಜಯಂತಿ ದಿನವಾಗಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಪಿಎಂ ವಿಶ್ವಕರ್ಮ’ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಈ ಯೋಜನೆ ಅಡಿ ವಿಶ್ವಕರ್ಮ ಜನಾಂಗದವರಿಗೆ ಮೂರು ಲಕ್ಷ ರೂಪಾಯಿವರೆಗೆ ಆಧಾರ ರಹಿತ ಸಾಲ, 15 ಸಾವಿರ ರೂಪಾಯಿಗಳವರೆಗಿನ ಟೂಲ್ ಕಿಟ್, ಕೌಶಲಾಭಿವೃದ್ಧಿಗೆ ತರಬೇತಿ ಮತ್ತು ದೈನಂದಿನ 500 ರೂಪಾಯಿ ಸಂಭಾವನೆ, ಸಂಪೂರ್ಣ ತಯಾರಾದ ಉತ್ಪನ್ನಗಳಿಗೆ ಕ್ವಾಲಿಟಿ ಸರ್ಟಿಫಿಕೇಷನ್, ಬ್ರಾಂಡಿಂಗ್ ಮತ್ತು ಜಾಹೀರಾತು ಮಾದರಿಯಲ್ಲಿ ಮಾರ್ಕೆಟಿಂಗ್ ನೆರವು ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿವೆ.
ಇಂದು ಬೆಳಗ್ಗೆ 11:30ಕ್ಕೆ ನವದೆಹಲಿಯ ದ್ವಾರಕಾದ ಯಶೋಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಪಿಎಂ ವಿಶ್ವಕರ್ಮ’ ಯೋಜನೆಗೆ ಚಾಲನೆ ನೀಡಲಿದ್ದು, ದೂರದರ್ಶನದ ಸುದ್ದಿ ವಾಹಿನಿ ಸೇರಿದಂತೆ ಹಲವು ದೃಶ್ಯ ಮಾಧ್ಯಮಗಳಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.