ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಹುದ್ದೆ ಹೆಸರಲ್ಲಿ ನೂರಾರು ಜನರಿಗೆ ನಕಲಿ ಆದೇಶ ಪತ್ರಗಳನ್ನು ನೀಡಿ ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ಚಿತ್ರದುರ್ಗ ಪೊಲೀಸರ ತಂಡ ಐವರು ಖದೀಮರನ್ನು ಬಂಧಿಸಿದೆ.
ರಾಜ್ಯದ ಉದ್ಯಮಿಗಳಿಗೆ ಮತ್ತೊಂದು ಶುಭ ಸುದ್ದಿ
ಮೊಹಮ್ಮದ್ ಸಾಬ್, ವೀರಭದ್ರಪ್ಪ, ಬಸವರಾಜ್, ಮಂಜುನಾಥ್, ಅನಿಲ್ ಕುಮಾರ್ ಬಂಧಿತ ಆರೋಪಿಗಳು. 2019ನೇ ಸಾಲಿನ ಕೆ.ಎಸ್.ಆರ್.ಟಿ.ಸಿಯ ಸಂಚಾರಿ ನಿರೀಕ್ಷಕ ಮತ್ತು ಸಹಾಯಕ ಸಂಚಾರಿ ಹುದ್ದೆ ಹೆಸರಿನಲ್ಲಿ ವಂಚನೆಯೆಸಗುತ್ತಿದ್ದರು. ನಕಲಿ ಆದೇಶ ಪತ್ರವನ್ನು ನೀಡಿ 500ಕ್ಕು ಹೆಚ್ಚು ಜನರಿಗೆ ವಂಚಿಸಿದ್ದರು.
BIG NEWS: SC/ST ಬಡ್ತಿ ಮೀಸಲಾತಿ ತೀರ್ಪು ಕಾಯ್ದಿಟ್ಟ ಸುಪ್ರೀಂಕೋರ್ಟ್; ಬಡ್ತಿ ಮೀಸಲು ಅನಿವಾರ್ಯ ಎಂದ ಕೇಂದ್ರ ಸರ್ಕಾರ
ಉದ್ಯೋಗಾಕಾಂಕ್ಷಿಗಳು ನೇಮಕಾತಿ ಪತ್ರ ಹಿಡಿದು ಬಂದು ಬೆಂಗಳೂರಿನ ಕೆ.ಎಸ್.ಆರ್.ಟಿ.ಸಿ ಕಚೇರಿಯಲ್ಲಿ ವಿಚಾರಿಸಿದಾಗಲೇ ತಮ್ಮ ಬಳಿ ಇದ್ದಿದ್ದು ನಕಲಿ ನೇಮಕಾತಿ ಪತ್ರ ಎಂಬುದು ಗೊತ್ತಾಗಿದೆ. ಹೊಸದುರ್ಗದ ಅಭಿಷೇಕ್ ಎಂಬುವವರು ಈ ವಂಚನೆ ಜಾಲದ ವಿರುದ್ಧ ಚಿತ್ರದುರ್ಗ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಐವರು ವಂಚಕರನ್ನು ಬಧಿಸಿದ್ದಾರೆ.