ಬೆಂಗಳೂರು: ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಅದ್ಯಕ್ಷೆ ಡಾ.ಪುಷ್ಪಾ ಅಮರನಾಥ್ ವಿರುದ್ಧವೇ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಪುಷ್ಪಾ ಅಮರನಾಥ್ ಅವರನ್ನು ಕೆಳಗಿಳಿಸುವಂತೆ ಒತ್ತಾಯಿಸಲಾಗುತ್ತಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಪೋಸ್ಟರ್ ಹಿಡಿದು ಬಂದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು, ಪುಷ್ಪಾ ಅಮರನಾಥ್ ಅವರನ್ನು ಕೆಳಗಿಳಿಸುವಂತೆ ಘೋಷಣೆ ಕೂಗಿದರು.
ಪುಷ್ಪಾ ಅಮರನಾಥ್, ಇತ್ತೀಚೆಗೆ ಏಕಾಏಕಿ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾಯಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಮಾಹಿತಿ ನೀಡದೇ ಜಿಲ್ಲಾ ಘಟಕದ ಅಧ್ಯಕ್ಷರನ್ನು ಬದಲಿಸಲಾಗಿದೆ. ಪುಷ್ಪಾ ಅಮರನಾಥ್ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಮೂರು ವರ್ಷ ಕಳೆದಿದ್ದು ಅವರ ಅವಧಿಯೂ ಮುಗಿದಿದೆ. ಈಗ ಯಾರಿಗೂ ಮಾಹಿತಿ ನೀಡದೇ 11 ಜಿಲ್ಲಾ ಘಟಕ ಅಧ್ಯಕ್ಷರ ದಿಢೀರ್ ಬದಲಾವಣೆಗೆ ಪುಷ್ಪಾ ಮುಂದಾಗಿದ್ದಾರೆ ಮೊದಲು ಪುಷ್ಪಾ ಅಮರನಾಥ್ ಅವರನ್ನು ವಜಾಗೊಳಿಸುವಂತೆ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.