![](https://kannadadunia.com/wp-content/uploads/2019/11/Parameshwar-High-Command_710x400xt.jpg)
ಕಲಬುರಗಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ಪಿಎಸ್ ಐ ನೇಮಕಾತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸುಉದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪಿಎಸ್ ಐ ಪರೀಕ್ಷೆಗೆ54 ಸಾವಿರ ಅಭ್ಯರ್ಥಿಗಳಿದ್ದು, ಪರೀಕ್ಷೆ ನಡೆಸಲು ಅಗತ್ಯ ಸೌಕರ್ಯ ಬೆಂಗಳೂರಿನಲ್ಲಿದೆ. ಇನ್ಮುಂದೆ 403, 660 ಪಿಎಸ್ ಐ ಸೇರಿ ಎಲ್ಲ ನೇಮಕ ಪರೀಕ್ಷೆಗಳನ್ನು ಆಯಾ ಜಿಲ್ಲೆಯಲ್ಲಿಯೇ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಪಿಎಸ್ ಐ ನೇಮಕಾತಿ ಪರೀಕ್ಷೆಗಳನ್ನು ಸ್ವಾಯತ್ತ ಸಂಸ್ಥೆಯಿಂದ ನಡೆಸುವಂತೆ ನ್ಯಾಯಾಲಯ ಆದೇಶಿಸಿದ್ದು, ಆಕಾಂಕ್ಷಿಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಪ್ರಸ್ತುತ ಕೆಇಎಯಿಂದ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.