ಬೆಂಗಳೂರು : ನವೆಂಬರ್ 18 ಮತ್ತು 19 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆ ನಡೆಯಲಿದ್ದು, ಮತ್ತಷ್ಟು ಬಿಗಿ ನಿಯಮ ಜಾರಿಗೆ ಬಂದಿದೆ.
ನೇರ ನೇಮಕಾತಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ವಸ್ತ್ರ ಸಂಹಿತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ .
ಈ ನಿಯಮ ಪಾಲನೆ ಕಡ್ಡಾಯ
1) ಅಭ್ಯರ್ಥಿಗಳು ಜೇಬು ಇಲ್ಲದ ಅಥವಾ ಕಡಿಮೆ ಜೇಬು ಇರುವ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.
2) ಕುರ್ತಾ, ಜೀನ್ಸ್, ಪೈಜಾಮು ಧರಿಸಲು ಅವಕಾಶ ಇಲ್ಲ
3) ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಹಾಫ್ ಶರ್ಟ್ ಧರಿಸಬೇಕು, ಫುಲ್ ಕೈ ಶರ್ಟ್ ಧರಿಸುವಂತಿಲ್ಲ.
4) ಅಭ್ಯರ್ಥಿಗಳು ಶೂ ಧರಿಸುವ ಹಾಗಿಲ್ಲ, ಚಪ್ಪಲಿಗಳನ್ನು ಧರಿಸಬೇಕು.
5) ಧರಿಸುವ ಬಟ್ಟೆಗಳಲ್ಲಿ ಜಿಪ್ ಪಾಕೆಟ್ ಗಳು, ದೊಡ್ಡ ಬಟನ್ ಇರಬಾರದು
6) ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವ ಹಾಗಿಲ್ಲ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್ ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವ ಹಾಗಿಲ್ಲ.
7) ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ ಹಾಗೂ ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ.
8) ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರ ಧರಿಸುವಂತಿಲ್ಲ.
9) ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಆಭರಣ ಧರಿಸುವ ಹಾಗಿಲ್ಲ. ಕಿವಿಯೋಲೆ, ಉಂಗುರ, ಕಡಗ ಧರಿಸುವುದನ್ನು ನಿರ್ಬಂಧಿಸಲಾಗಿದೆ.