ನವದೆಹಲಿ : ದೇಶದ 7.6 ಕೋಟಿ ನರೇಗಾ ಕಾರ್ಮಿಕರ ಜಾಬ್ ಕಾರ್ಡ್ ಡಿಲೀಟ್ ಆಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಕೇಂದ್ರ ಬಿಜೆಪಿ ಸರ್ಕಾರ ಆಧಾರ್ ಲಿಂಕ್ ಮಾಡಿಸದ ಕಾರಣ ಕೋಟ್ಯಂತರ ಬಡ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದಿದೆ. ಕರ್ನಾಟಕದ 8.7 ಲಕ್ಷ ಮಂದಿ ಸೇರಿ ದೇಶದ 7.6 ಕೋಟಿ ಮನರೇಗಾ ಕಾರ್ಮಿಕರ ಜಾಬ್ ಕಾರ್ಡ್ ಡಿಲೀಟ್ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಕಾಂಗ್ರೆಸ್ ಜಾರಿಗೆ ತಂದಿದ್ದ ಮನರೇಗಾ ಯೋಜನೆಯನ್ನು ಬಿಜೆಪಿ ಸರ್ಕಾರ ನಿಲ್ಲಿಸಲು ಹೊರಟಿದೆ.
ಬಿಜೆಪಿಯ ಅನ್ಯಾಯವನ್ನು ಪ್ರಶ್ನಿಸೋಣ, ಈ ಹೋರಾಟ ಬೆಂಬಲಿಸಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.