ಬೆಂಗಳೂರು: ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತಮ್ಮ ಕನಸಿನ ಪಂಚರತ್ನ ಯಾತ್ರೆಗೆ ಸಾಂಕೇತಿಕ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಿದ್ದು, ಇತ್ತೀಚೆಗೆ ನಮ್ಮ ತಂದೆ, ಮಾಜಿ ಪ್ರಧಾನಿ ದೇವೇಗೌಡರನ್ನು ಉಳಿಸಿದ್ದು, ಅವರಿಗೆ ಪುನರ್ಜನ್ಮ ನೀಡಿದ್ದು ಶಿವ ಹಾಗಾಗಿ ಗವಿಗಂಗಾಧರೇಶ್ವರ ದೇವಸ್ಥಾನದಿಂದಲೇ ಪಂಚರತ್ನ ಯಾತ್ರೆ ಆರಂಭವಾಗಿದೆ. ನಾಳೆ ಅಣ್ಣಮ್ಮ ದೇವಿ ದೇವಸ್ಥಾನದಿಂದಲ್ಲಿ 2ನೇ ದಿನದ ಕಾರ್ಯಕ್ರಮವಿದೆ ಎಂದರು.
ಈ ಯಾತ್ರೆ ಪಕ್ಷಕ್ಕೆ ಶಕ್ತಿ ಜೊತೆಗೆ ರಾಜ್ಯದ ಅಭಿವೃದ್ದಿಗೆ ಪೂರಕವಾಗಲಿದೆ. ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ ಯೋಜನೆ ಮೊದಲಾದ ವಿಚಾರ ಇಟ್ಟುಕೊಂಡು ಯಾತ್ರೆ ಆರಂಭಿಸಲಾಗಿದೆ ಎಂದರು.
ಕಾಂಗ್ರೆಸ್ ನ ಜೋಡೋ, ಟ್ರ್ಯಾಕ್ಟರ್ ಯಾತ್ರೆ ಎಲ್ಲಾ ನೋಡಿದ್ದೇವೆ. ಕೃಷ್ಣಾ ಮೇಲ್ದಂಡೆ, ಮಹದಾಯಿಗಾಗಿ ಟ್ರ್ಯಾಕ್ಟರ್ ಯಾತ್ರೆ ಆರಂಭಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. 5 ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದರು. ಅಧಿಕಾರ ಇದ್ದಾಗ ಏನೂ ಮಾಡದೇ ಈಗ ಮಾಡ್ತೀವಿ ಅಂತಾರೆ. ರಾಜ್ಯದ ಜನತೆ ನಿಮ್ಮ ಸುಳ್ಳು ಭರವಸೆ ನಂಬಲ್ಲ ಎಂದು ಟಾಂಗ್ ನೀಡಿದರು.