ಹಾಸನ: ರಾಜ್ಯಸಭಾ ಚುನಾವಣೆ ಬಳಿಕ ಜೆಡಿಎಸ್ ಗೆ ಆಘಾತದ ಮೇಲೆ ಆಘಾತವಾಗುತ್ತಿದೆ. ಶಾಸಕರು ಪಕ್ಷ ತೊರೆದು ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆ. ಇದೀಗ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಜೆಡಿಎಸ್ ವಾಟ್ಸಪ್ ಗ್ರೂಪ್ ನಿಂದ ಎಕ್ಸಿಟ್ ಆಗಿದ್ದು, ಅವರು ಕೂಡ ಪಕ್ಷ ಬಿಡಲು ನಿರ್ಧರಿಸಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.
2023ಕ್ಕೆ ಜನತಾ ಸರ್ಕಾರ, ಕನ್ನಡ ನಾಡಿನ ಜೆಡಿಎಸ್ ಪಡೆ, ವಿಜಯಪುರ ಜೆಡಿಎಸ್, ದಳಪತಿಗಳು ಎಂಬ ವಾಟ್ಸಪ್ ಗ್ರೂಪ್ ನಿಂದ ಹಿರಿಯ ಶಾಸಕ ಶಿವಲಿಂಗೇಗೌಡರು ಹೊರ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಕೆಲ ದಿನಗಳಿಂದ ಶಿವಲಿಂಗೇಗೌಡರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದರು. ರಾಜ್ಯಸಭಾ ಚುನಾವಣೆ ವೇಳೆ ನಾಯಕರ ಬಗ್ಗೆ ಅಸಮಾಧಾನವಿದೆ ಎಂಬುದನ್ನು ತಿಳಿಸಿದ್ದರು. ಇದೀಗ ಏಕಾಏಕಿ ವಾಟ್ಸಪ್ ಗ್ರೂಪ್ ನಿಂದ ಹೊರ ಬಂದಿರುವುದು ಶಾಸಕರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದೆ.