alex Certify BIG NEWS : ರಾಜ್ಯದ ಸರ್ಕಾರಿ ಕ್ರೀಡಾಂಗಣದಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ ಸರ್ಕಾರಿ ಕ್ರೀಡಾಂಗಣದಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಕ್ರೀಡಾಂಗಣ ನಿರ್ವಹಣೆಯಲ್ಲಿ ಸರ್ಕಾರದ ಆದೇಶದ ಪಾಲನೆ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಏನಿದೆ ಆದೇಶದಲ್ಲಿ..? ಮುಂದೆ ಓದಿ

1. ಕ್ರೀಡಾಂಗಣಗಳನ್ನು ಸರ್ಕಾರದ ಅನುಮತಿ ಇಲ್ಲದೇ ದೀರ್ಘಾವಧಿಗೆ ಬಾಡಿಗೆ ನೀಡುವಂತಿಲ್ಲ ಅಥವಾ ಇತರೆ ರೀತಿಯಲ್ಲಿ ಪರಭಾರೆ ಮಾಡುವಂತಿಲ್ಲ.

ಉಲ್ಲೇಖ-2 ರ ಸರ್ಕಾರದ ಆದೇಶದನ್ವಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣಗಳ ದೈನಂದಿನ ನಿರ್ವಹಣೆಗೆ ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣಾ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿದ್ದು, ಕೆಳಕಾಣಿಸಿದ ಸಾಮಾನ್ಯ ಮಾರ್ಗಸೂಚಿಗಳ ಕುರಿತು ಗಮನ ಸೆಳೆಯಲಾಗಿದೆ.

1. ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಗಳು ಸರ್ಕಾರದ ಪೂರ್ವಾನುಮತಿ ಇಲ್ಲದೇ ಗುತ್ತಿಗೆ/ಹೊರಗುತ್ತಿಗೆ ಸೇರಿದಂತೆ ಯಾವುದೇ ನೇಮಕಾತಿಗಳನ್ನು ಮಾಡುವಂತಿಲ್ಲ.

2. ಜಿಲ್ಲೆಯ ಯಾವುದೇ ಇಲಾಖಾ ಕ್ರೀಡಾಂಗಣದಲ್ಲಿ ರೂ 50.00 ಲಕ್ಷ ವೆಚ್ಚ ಮೀರಿದ ಯಾವುದೇ ಒಂದು ಅಭಿವೃದ್ಧಿ ಕಾರ್ಯವನ್ನು ಅಥವಾ ವಾರ್ಷಿಕ ಒಟ್ಟು ರೂ100.00 ಲಕ್ಷ ಮಿತಿ ಮೇಲ್ಪಟ್ಟ ಕಾಮಗಾರಿ/ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

3. ಕ್ರೀಡಾಂಗಣದ ಆಸ್ತಿಗಳನ್ನು ವಾರ್ಷಿಕ ಬಾಡಿಗೆಗೆ ನೀಡುವ ಅಥವಾ ಹೊರಗುತ್ತಿಗೆ ನೀಡುವ ಸಂದರ್ಭದಲ್ಲಿ ಇಲಾಖೆಯ ಪೂರ್ವಾನುಮತಿ ಪಡೆಯತಕ್ಕದ್ದು.

4. ಇಲಾಖೆಯ ಕ್ರೀಡಾಂಗಣಗಳನ್ನು ಹಾಗೂ ಇಲಾಖಾ ಆಸ್ತಿಗಳನ್ನು ಇಲಾಖೆಯ ಪೂರ್ವಾನುಮತಿ ಇಲ್ಲದೇ ಇತರೆ ಇಲಾಖೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ತಾತ್ಕಾಲಿಕವಾಗಿಯಾಗಲೀ ಅಥವಾ ಶಾಶ್ವತವಾಗಿಯಾಗಲೀ ಪರಭಾರೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಉಲ್ಲೇಖ-1 ಮತ್ತು 2 ರ ಆದೇಶಗಳು ಜಾರಿಗೆ ಬಂದ ನಂತರ ಸದರಿ ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ, ಸಂಬಂಧಪಟ್ಟ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು ನಿಯಮಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿವರಗಳನ್ನು ದಿನಾಂಕ: 15-03-2025 ರೊಳಗೆ ಕೆಳಸಹಿದಾರರಿಗೆ ಒದಗಿಸತಕ್ಕದ್ದು.

ಇಲಾಖಾ ಆಸ್ತಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ಚಟುವಟಿಕೆಗಳು ನಡೆದಲ್ಲಿ ಅಥವಾ ಇಲಾಖಾ ಆಸ್ತಿಗಳನ್ನು ಇತರರು ಅತಿಕ್ರಮಿಸಿದಲ್ಲಿ, ದುರ್ಬಳಕೆ ಮಾಡಿಕೊಂಡಲ್ಲಿ ಅವುಗಳನ್ನು ತಡೆಯುವುದು ಹಾಗೂ ತಕ್ಷಣ ಇಲಾಖಾ ಮುಖ್ಯಸ್ತರ ಗಮನಕ್ಕೆ ತರುವುದು ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ. ಇನ್ನು ಮುಂದೆ ಉಲ್ಲೇಖ-1 ಮತ್ತು 2 ರ ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...