ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತನಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ ಬೆನ್ನಲ್ಲೇ ಇತ್ತ ರಾಜ್ಯ ಸರ್ಕಾರ ಕೂಡ ಆಘಾತ ನೀಡಿದ್ದು, ಸಿಎಂ ಕಚೇರಿ ಆಪ್ತ ಸಹಾಯಕ ಹುದ್ದೆಯಿಂದ ಉಮೇಶ್ ಅವರನ್ನು ತೆಗೆಯಲಾಗಿದೆ.
ಐಟಿ ದಾಳಿ ಬೆನ್ನಲ್ಲೇ ಉಮೇಶ್ ಅವರನ್ನು ಸಿಎಂ ಕಚೇರಿ ಡ್ಯೂಟಿಯಿಂದ ಗೇಟ್ ಪಾಸ್ ನೀಡಲಾಗಿದ್ದು, ಸಿಎಂ ಸಚಿವಾಲಯದಲ್ಲಿ ಅನ್ಯಸೇವೆ ಆಧಾರದ ಮೇಲೆ ಉಮೇಶ್ ಕರ್ತವ್ಯ ನಿರ್ವಹಣೆಗೆ ತಡೆ ನೀಡಲಾಗಿದೆ.
ಆದರೆ ಉಮೇಶ್ ಅವರ ಅನ್ಯಸೇವೆ ನಿಯೋಜನೆಯನ್ನು ಬಿಎಂಟಿಸಿ ವಾಪಸ್ ಪಡೆದಿದೆ. ಆರಂಭದಲ್ಲಿ ಉಮೇಶ್ ಬಿಎಂಟಿಸಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಬಿ ಎಸ್ ವೈಗೆ ಆಪ್ತನಾಗಿ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇದೀಗ ಸಿಎಂ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿಯೂ ಸರ್ಕಾರದ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಐಟಿ ದಾಳಿ ಬೆನ್ನಲ್ಲೇ ರಾಜ್ಯ ಸರ್ಕಾರ ಸಿಎಂ ಕಚೇರಿಯಿಂದ ಉಮೇಶ್ ಅವರನ್ನು ತೆಗೆದುಹಾಕಿದೆ.