alex Certify BIG NEWS: IPS ಅಧಿಕಾರಿ ಎಂದು ಹೇಳಿ 2.5 ಕೋಟಿ ರೂ. ವಂಚಿಸಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: IPS ಅಧಿಕಾರಿ ಎಂದು ಹೇಳಿ 2.5 ಕೋಟಿ ರೂ. ವಂಚಿಸಿದ ಭೂಪ

ಬೆಂಗಳೂರು: ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಆರೋಪಿಯೊಬ್ಬ ವ್ಯಕ್ತಿಯೋರ್ವರಿಗೆ 2.5 ಕೋಟಿ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀನಿವಾಸ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಐಪಿಎಸ್ ಅಧಿಕಾರಿ ಎಂದು ಹೇಳುತ್ತಿದ್ದ ಶ್ರೀನಿವಾಸ್, ತಾನು ಪ್ರೊಬೇಷನರಿ ಎಸ್ ಪಿ ಎಂದು ಹೇಳಿಕೊಂಡು ಕೆಲ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿದ್ದಂತೆ. ಪ್ರಸ್ತುತ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸುತ್ತಿದ್ದಂತೆ.

ಮೈಸೂರಿನಲ್ಲಿ 450 ಕೋಟಿ ಲ್ಯಾಂಡ್ ವ್ಯವಹಾರವಿದೆ. ಅದು ಡೀಲ್ ಆದರೆ 250 ಕೋಟಿ ಸಿಗುತ್ತೆ. ಸಧ್ಯ ಒಂದಿಷ್ಟು ಹಣ ಬೇಕು ಎಂದು ಕೇಳಿ ವ್ಯಕ್ತಿಯೋರ್ವರಿಂದ ಪಡೆದಿದ್ದ. ಬಳಿಕ ಹಂತ ಹಂತವಾಗಿ 2.5 ಕೋಟಿ ಹಣ ಪಡೆದು ವಂಚಿಸಿದ್ದ. ಈ ಹಿನ್ನೆಲೆಯಲ್ಲಿ ನಕಲಿ ಐಪಿಎಸ್ ಅಧಿಕಾರಿಯಿಂದ ಮೋಸ ಹೋದವರು ತಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...