ನವದೆಹಲಿ: ದೇಶದಲ್ಲಿ ಈವರೆಗೆ ಒಟ್ಟು 1,200 ಕೋವಿಡ್ -19 ಉಪ-ರೂಪಾಂತರ ಜೆಎನ್ .1 ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕದಲ್ಲೇ ಅತಿ ಹೆಚ್ಚು ಕೇಸ್ ಗಳು ದಾಖಲಾಗಿವೆ.
ಇಂಡಿಯನ್ ಸಾರ್ಸ್-ಕೋವ್-2 ಜೆನೋಮಿಕ್ಸ್ ಕನ್ಸೋರ್ಟಿಯಂ (ಐಎನ್ಎಸ್ಎಸಿಒಜಿ) ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 215, ಆಂಧ್ರಪ್ರದೇಶ (189), ಮಹಾರಾಷ್ಟ್ರ (170), ಕೇರಳ (154), ಪಶ್ಚಿಮ ಬಂಗಾಳ (96), ಗೋವಾ (90), ತಮಿಳುನಾಡು (88) ಮತ್ತು ಗುಜರಾತ್ (76) ಪ್ರಕರಣಗಳು ವರದಿಯಾಗಿವೆ.
ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ತಲಾ 32, ಛತ್ತೀಸ್ಗಢದಲ್ಲಿ 25, ದೆಹಲಿಯಲ್ಲಿ 16, ಉತ್ತರ ಪ್ರದೇಶದಲ್ಲಿ 7, ಹರಿಯಾಣದಲ್ಲಿ 5, ಒಡಿಶಾದಲ್ಲಿ 3, ಉತ್ತರಾಖಂಡ ಮತ್ತು ನಾಗಾಲ್ಯಾಂಡ್ನಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ದೇಶದಲ್ಲಿ ಜೆಎನ್ .1 ಉಪ-ರೂಪಾಂತರ ಪತ್ತೆಯ ಮಧ್ಯೆ ನಿರಂತರ ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ.