ಬೆಂಗಳೂರು : ಪ್ರಧಾನಿ ಮೋದಿ ಇಂದು ಬೆಂಗಳೂರಿನ ಪ್ರಮುಖ 2 ರಿಂಗ್ ರೋಡ್ ನ್ನು ವರ್ಚುವಲ್ ಆಗಿ ಲೋಕಾರ್ಪಣೆಗೊಳಿಸಿದರು.
ಬೆಂಗಳೂರಿನ ಮಹತ್ವಾಕಾಂಕ್ಷಿ ಸೆಟಲೈಟ್ ಟೌನ್ ರಿಂಗ್ ರೋಡ್ನ ಎರಡು ಪ್ರಮುಖ ರಸ್ತೆಗಳನ್ನು ಲೋಕಾರ್ಪಣೆ ಮಾಡಿದ್ದು, ಈ ಮೂಲಕ ವಾಹನ ಸವಾರರಿಗೆ ಕೊಡುಗೆ ನೀಡಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ಸೆಟಲೈಟ್ ಟೌನ್ ಟೌನ್ ರಿಂಗ್ ರೋಡನ್ನು ನಿರ್ಮಿಸಲಾಗಿದ್ದು, ದಾಬಸ್ಪೇಟೆಯಿಂದ ದೊಡ್ಡ ಬಳ್ಳಾಪುರವನ್ನು ಸಂಪರ್ಕಿಸುವ 42 ಕಿ.ಮೀ. ಉದ್ದದ ರಸ್ತೆಯನ್ನು 1438 ಕೋಟಿ ರೂ. ಮತ್ತು ದೊಡ್ಡಬಳ್ಳಾಪುರದಿಂದ ಹೊಸಕೋಟೆ ನಡುವಿನ 37 ಕಿ.ಮೀ ಉದ್ದದ ರಸ್ತೆಯನ್ನು 1317 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
1,438 ಕೋಟಿ ಮತ್ತು 1,317 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ದಾಬಸ್ ಪೇಟೆ – ದೊಡ್ಡಬಳ್ಳಾಪುರ ಬೈಪಾಸ್ ವಿಭಾಗ ಮತ್ತು ದೊಡ್ಡಬಳ್ಳಾಪುರ ಬೈಪಾಸ್ – ಹೊಸಕೋಟೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.