ಬೆಂಗಳೂರು : ದೆಹಲಿ ಮುಖ್ಯಮಂತ್ರಿ ಅರವಿಂ್ದ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿ ಜೈಲಿನಿಂದ ಬಿಡುಗಡೆಗೊಳಿಸಿದ ಸುಪ್ರೀಂಕೋರ್ಟ್ ಆದೇಶ ದೇಶದ ನ್ಯಾಯಾಂಗದ ಮೇಲಿನ ನಮ್ಮೆಲ್ಲರ ನಂಬಿಕೆಯನ್ನು ಇನ್ನಷ್ಟು ದೃಢೀಕರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಡುತ್ತಿರುವವರೆಲ್ಲರಿಗೂ ಈ ಆದೇಶ ಭರವಸೆ ಹುಟ್ಟಿಸಿದೆ. ಸುಪ್ರೀಂಕೋರ್ಟ್ ನ ಈ ಆದೇಶ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ರಾಜಕೀಯ ದ್ವೇಷ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೊಟ್ಟ ತಪರಾಕಿಯಾಗಿದೆ. ದ್ವೇಷದ ರಾಜಕಾರಣಕ್ಕೆ ಇಳಿದಿರುವ ಮೋದಿ ನೇತೃತ್ವದ ಸರ್ಕಾರ ನ್ಯಾಯಾಲಯದ ಈ ಆದೇಶದಿಂದಾದರೂ ಪಾಠ ಕಲಿತು ಎಚ್ಚೆತ್ತುಕೊಳ್ಳಲಿ. ಅಂತಿಮವಾಗಿ ಸತ್ಯವೇ ಗೆಲ್ಲುವುದು, ನ್ಯಾಯವೇ ಬಾಳುವುದು. ಸತ್ಯಮೇವ ಜಯತೆ..ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.