ಬೆಂಗಳೂರು : ರಾಜ್ಯದ ಶಾಲಾ ನೌಕರುಗಳ ವಿವಿಧ ಭತ್ಯೆಗಳ ಮರು ಪಾವತಿ ಕುರಿತು ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ ಹೊರಡಿಸಿದೆ.
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲಾ ನೌಕರರುಗಳ ಸಮಸ್ಯೆಗಳ ಕುರಿತು ಮತ್ತು ನೌಕರರಿಗೆ ತಪ್ಪಾಗಿ ಪಾವತಿಸಲಾದ ಭತ್ಯೆಗಳನ್ನು ಸರಿಪಡಿಸಿ ಮರುಪಾವತಿಸುವ ಕುರಿತು ಆದೇಶ ಹೊರಡಿಸಿದೆ.
ಏನಿದೆ ಆದೇಶದಲ್ಲಿ..?
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ವೇತನ ಬಟವಾಡೆ ಅಧಿಕಾರಿಗಳಿಗೆ ತಮ್ಮ ಹಂತದಲ್ಲಿಯೇ ಕೆಲವೊಂದು ಮಾಹಿತಿಗಳನ್ನು ಅಳವಡಿಸಿಕೊಳ್ಳಲು OPTION ನೀಡಲಾಗಿದ್ದರೂ ಸಹ ಈ ಕೆಳಕಂಡ ಬದಲಾವಣೆಗಳಿಗಾಗಿ ಹೆಚ್.ಆರ್.ಎಂ.ಎಸ್. ಶಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿದೆ. ಸದರಿ ವಿಷಯಕ್ಕೆ ಸಂಬಂಧಪಟ್ಟಂತೆ ಈ ಕೆಳಕಂಡ ಅಂಶಗಳನ್ನು ಗಮನಿಸಲಾಗಿದೆ.
1. ಹೆಚ್.ಆರ್.ಎಂ.ಎಸ್. ಶಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಡಿ.ಡಿ.ಓ ಕೋಡ್ ಮತ್ತು ಕೆ.ಜಿ.ಐ.ಡಿ ಸಂಖ್ಯೆ ಕಾರ್ಯನಿರ್ವಾಹಕರ ಪೋನ್ ನಂಬರ್ ಮೇಲ್ ಐಡಿ ಮಾಹಿತಿಗಳನ್ನು ನಮೂದಿಸುತ್ತಿಲ್ಲ. ಈ ಮಾಹಿತಿಗಳಿಲ್ಲದೇ ಯಾವುದೇ ಸಮಸ್ಯೆಗಳನ್ನು ನಮ್ಮ ಹಂತದಲ್ಲಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ.
2. ಹೆಚ್.ಆರ್.ಎಂ.ಎಸ್ ಶಾಖೆಗೆ ಬಂದ ಪತ್ರಗಳನ್ನು ನಮ್ಮ ಹಂತದಲ್ಲಿ ಪರಿಶೀಲಿಸಿ ಬ್ಯಾಕ್ ಎಂಡ್ ನಲ್ಲಿ Complaint lodge ಮಾಡಲಾಗುತ್ತಿದೆ. ಈ ರೀತಿ ಕ್ರಮವಹಿಸಿರುವ ಮಾಹಿತಿಗಳನ್ನು ವೇತನ ಬಟವಾಡ ಅಧಿಕಾರಿಗಳು ತಮ್ಮ ಹಂತದಲ್ಲಿಯೇ ನೋಡಿಕೊಳ್ಳಲು Backend Complaint Status option ನೀಡಲಾಗಿದೆ. ಈ Option ನಲ್ಲಿ ನಿಮ್ಮ ಸಮಸ್ಯೆಗಳಿಗೆ ಕ್ರಮವಾಗಿರುವ ಬಗ್ಗೆ ಮತ್ತು ವೇತನ ಬಟವಾಡ ಅಧಿಕಾರಿಗಳು ಸದರಿ ಆ ಸಮಸ್ಯೆಗಳಿಗೆ ಯಾವ ರೀತಿ ಕ್ರಮವಹಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿರುತ್ತಾರೆ. ವೇತನ ಬಟವಾಡೆ ಅಧಿಕಾರಿಗಳು ಈ Option ನಲ್ಲಿ ಪರಿಶೀಲಿಸಿಕೊಳ್ಳದೇ ಪದೇ ಪದೇ ಹಳೆ ಪ್ರಸ್ತಾವನೆಗಳನ್ನು ಶಾಖೆಗೆ ಸಲ್ಲಿಸಲಾಗುತ್ತಿರುವುದರಿಂದ ಪ್ರಕರಣಗಳ ಇತ್ಯರ್ಥಕ್ಕೆ ವಿಳಂಬವಾಗುತ್ತಿದೆ.
3. ಹೆಚ್.ಆರ್.ಎಂ.ಎಸ್ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ/ ಸಮಸ್ಯೆಗಳ ನಿವಾರಣೆಗಾಗಿ ವಿಷಯ ನಿರ್ವಾಹಕರುಗಳು/ ವೇತನ ಬಟವಾಡೆ ಅಧಿಕಾರಿಗಳು ಶಾಖೆಗೆ ಭೇಟಿ ನೀಡದೆ ಶಿಕ್ಷಕರುಗಳನ್ನು/ಇತರರನ್ನು ಕಳುಹಿಸುತ್ತಿರುವುದರಿಂದ ತಾಂತ್ರಿಕ ಸಮಸ್ಯೆಗಳು ಅವರಿಗೆ ಅರ್ಥವಾಗದೇ ಕಛೇರಿಯ ಸಮಯ ವ್ಯರ್ಥವಾಗುತ್ತಿದೆ.
4. ಹೆಚ್.ಆರ್.ಎಂ.ಎಸ್. ಶಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸುವಾಗ ವಾಸ್ತವವಾಗಿ ಆಗುತ್ತಿರುವ ಸಮಸ್ಯೆಗಳನ್ನು ವೇತನ ಬಟವಾಡೆ ಅಧಿಕಾರಿಗಳು ಮೊದಲು ಅರ್ಥ ಮಾಡಿಕೊಂಡು ಅದಕ್ಕೆ ನಿರ್ದಿಷ್ಟ ಬದಲಾವಣೆಗಳು ಆಗಬೇಕೆಂಬುದನ್ನು ಸರಿಯಾಗಿ ನಮೂದಿಸಿ ಸಮಸ್ಯೆಗಳಿಗೆ ಸಂಬಂಧಿಸಿದ ಹೆಚ್.ಆರ್.ಎಂ.ಎಸ್ Screenshot & ಆದೇಶಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
5. 10/15/20/25/30 1 Time Bond Request/DOB/DOJ/Payscale/NAME/DESIGNATION/ GROUP/ SALARYBILL, ARREARS BILL & FA BILL REVERT/UNAPPROVE LEAVE ENCASHMENT/ ASSIGN NEW DDO/REAPPOINTMENT IN SERVICE OUT/PP-SFN/PH/EXIT APPROVAL/ENABLE EMP ADDITION ಈ ಮಾಹಿತಿಗಳನ್ನು ಡಿ.ಡಿ.ಓಗಳು Hrms Online ಮುಖಾಂತರ Request ನೀಡಬೇಕು ಈ ಸಮಸ್ಯೆಗಳಿಗೆ ಪತ್ರ ವ್ಯವಹಾರ ಮಾಡುವ ಅಗತ್ಯವಿಲ್ಲ. ಇದರ ಹೊರತಾಗಿಯೂ ಶಾಖೆಗೆ ಪತ್ರ ಸಲ್ಲಿಸುತ್ತಿದ್ದರೆ ಆಯುಕ್ತರ ಕಛೇರಿಯ ಹೆಚ್.ಆರ್.ಎಂ.ಎಸ್ ವಿಭಾಗದಿಂದ ಯಾವುದೇ ರೀತಿಯ ಕ್ರಮವಹಿಸಲಾಗುವುದಿಲ್ಲ ಎಂದು ತಿಳಿಸಿದೆ.