ಬೆಂಗಳೂರು : ಎನ್ ಪಿ ಎಸ್ ನೌಕರರ ಕುಟುಂಬ ಪಿಂಚಣಿ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಏನಿದೆ ಸುತ್ತೋಲೆಯಲ್ಲಿ..?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಎನ್.ಪಿ.ಎಸ್. ನೌಕರರ ಕುಟುಂಬ ಪಿಂಚಣಿ ಪರಿವರ್ತನೆಯ ಪ್ರಸ್ತಾವನೆಗಳನ್ನು ರಾಜ್ಯದ ಖಜಾನೆಗಳಿಂದ ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುತ್ತಿರುವುದು ಸರಿಯಷ್ಟೇ ಸದರಿ ಪ್ರಸ್ತಾವನೆಗಳಲ್ಲಿ ಡಿ.ಡಿ.ಓ.ರವರು ಅಪೂರ್ಣ ಮಾಹಿತಿ ಹಾಗೂ ಅಪೂರ್ಣ ದಾಖಲೆಗಳನ್ನು ನೀಡುತ್ತಿದ್ದು, ಅವುಗಳನ್ನು ಗಮನಿಸದೆ ಖಜಾನಾಧಿಕಾರಿಗಳು ನೇರವಾಗಿ ಎನ್.ಪಿ.ಎಸ್. ಘಟಕಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಎನ್.ಪಿ.ಎಸ್. ಘಟಕದಲ್ಲಿ ಪ್ರಸ್ತಾವನೆಗಳನ್ನು ಶೀಘ್ರುವಾಗಿ ಇತ್ಯರ್ಥಪಡಿಸಲು ಸಾಧ್ಯವಾಗದೇ, ಪೂರಕ ದಾಖಲೆಗಳ ಕೊರತೆಯಿಂದ ಪ್ರಸ್ತಾವನೆಗಳನ್ನು ಹಿಂದಿರುಗಿಸಲಾಗುತ್ತಿದೆ.
ಈ ಸಂಬಂಧ ಪತ್ರದೊಂದಿಗೆ ಲಗತ್ತಿಸಲಾಗಿರುವ ಹೊಸ ಪರಿಶೀಲನಾ ಪಟ್ಟಿ (Check List) ಯಂತೆ ದಾಖಲೆಗಳನ್ನು ಸಿದ್ಧಪಡಿಸಿ, ದೃಢೀಕರಿಸಿ ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿ ಪರಿಶೀಲನಾ ಪಟ್ಟಿ (Check List) ಯನ್ನು ಡಿಡಿಓಗಳಿಗೆ ನೀಡುವುದು ಹಾಗೂ ಸದರಿ ಪರಿಶೀಲನಾ ಪಟ್ಟಿಯನ್ನಯ ಡಿಡಿಓ ರವರಿಂದ ಪ್ರಸ್ತಾವನೆ ಸ್ವೀಕರಿಸಿದ ನಂತರ ಖಜಾನಾಧಿಕಾರಿಗಳು ಪರಿಶೀಲಿಸಿ ತಮ್ಮ ಹಂತದಲ್ಲಿಯೇ ತಪ್ಪುಗಳನ್ನು ಸರಿಪಡಿಸಿ ಪ್ರಸ್ತಾವನೆಗಳನ್ನು ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುವಂತೆ ಸೂಚಿಸಿದೆ.